ಕಲಬುರಗಿ:ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ, ಹಿಂದೆ ಯಾರಾದರೂ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದರೆ ಅವರಿಗೆ ಎಲ್ಲಿಲ್ಲದ ಗೌರವ ಸಮಾಜದಲ್ಲಿ ಅವರು ಪ್ರಶಸ್ತಿ ಪುರಸ್ಕೃತರು ಎಂಬ ದೃಷ್ಟಿಕೋನದಿಂದ ನೋಡುತ್ತಿದ್ದರು ಏಕೆಂದರೆ ಹಿಂದೆ ಯಾರೇ ಆಗಲಿ ಅಷ್ಟು ಸುಲಭವಾಗಿ ಪ್ರಶಸ್ತಿಗಳು ಪಡೆಯಲು ಆಗುತ್ತಿರಲಿಲ್ಲ ಹಾಗಾಗಿ ಪ್ರಶಸ್ತಿಗಳು ಅರ್ಹತೆ ಉಳ್ಳವರಿಗೆ ಮಾತ್ರ ದೊರಕುತ್ತಿದ್ದವು ಹಿಂದೆ ಪ್ರಶಸ್ತಿಗೆ ಅರ್ಜಿ ಕರೆಯುತ್ತಿರಲಿಲ್ಲ ಪ್ರಶಸ್ತಿಗೆ ಅರ್ಹತೆ ಇರುವ ಯೋಗ್ಯರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರಶಸ್ತಿ ನೀಡುತ್ತಿದ್ದರು ಆದ್ದರಿಂದ ಆಗ ಪ್ರಶಸ್ತಿ ಪಡೆದವರಿಗೆ ಸಮಾಜದಲ್ಲಿ ಎಲ್ಲಿಲ್ಲದ ಗೌರವ ಸಿಗುತ್ತಿತ್ತು. ಹೀಗಾಗಿ ಇತ್ತೀಚಿನ ದಿನಮಾನಗಳಲ್ಲಿ ಪ್ರಶಸ್ತಿಗಳು ತನ್ನ ಮೌಲ್ಯ ಕಳೆದುಕೊಂಡಿದೆ ಏಕೆಂದರೆ 90% ಪ್ರಶಸ್ತಿಗಳು ಯೋಗ್ಯತೆ ಇಲ್ಲದವರಿಗೆ ಲಭಿಸುತ್ತಿದೆ ಆ ಪ್ರಶಸ್ತಿಗಗಳಿಗೆ ಹೀಗಾಗಿ ಮೌಲ್ಯ ಕಳೆದುಕೊಂಡಿವೆ ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ ಅರ್ಜಿ ಕರೆಯುತ್ತಾರೆ ಆಗ ಪ್ರಶಸ್ತಿಗೆ ಯೋಗ್ಯರಲ್ಲದವರು ಅರ್ಜಿ ಹಾಕುತ್ತಾರೆ ಯೋಗ್ಯತೆ ಇರುವವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅರ್ಜಿ ಹಾಕುತ್ತಾರೆ ಆಗ ಕೆಲವರು ಪ್ರಶಸ್ತಿಗೆ ಯೋಗ್ಯತೆ ಇದ್ದವರು ಅರ್ಜಿ ಹಾಕಲ್ಲ ಏಕೆಂದರೆ ಪ್ರಶಸ್ತಿಗಳು ಆಯಾ ಕ್ಷೇತ್ರದಲ್ಲಿ ಯೋಗ್ಯತೆ ಇರುವವರನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡಬೇಕೆ ಹೊರತು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಿ ಪಡಿಯಬೇಕಿಲ್ಲ ಎಂಬುವುದು ಕೆಲವರ ವಾದ ಅರ್ಜಿ ಹಾಕಿ ಪ್ರಶಸ್ತಿ ಪಡೆಯದಿದ್ದರೂ ಪರವಾಗಿಲ್ಲ ಪ್ರಶಸ್ತಿ ಪಡೆಯದೆ ಇದ್ದರೂ ಇರುವ ಗೌರವ ಇದ್ದೇ ಇರುತ್ತದೆ ಸಿನಿಮ ಕ್ಷೇತ್ರವಿರಲಿ ಶಿಕ್ಷಕರ ಕ್ಷೇತ್ರವಿರಲಿ ಮಾಧ್ಯಮ ಕ್ಷೇತ್ರವಿರಲಿ ಸಾರ್ವಜನಿಕ ಕ್ಷೇತ್ರವಿರಲಿ ರಾಜಕೀಯ ಕ್ಷೇತ್ರವಿರಲಿ ಯಾವುದೇ ಕ್ಷೇತ್ರವಿರಲಿ ಇಂದು ಯೋಗ್ಯತೆ ಇರುವವರಿಗೆ ಪ್ರಶಸ್ತಿಗಳು ಸಿಗುತ್ತಿಲ್ಲ ಹೆಚ್ಚಿನದಾಗಿ ಅನರ್ಹರಿಗೆ ಪ್ರಶಸ್ತಿಗಳನ್ನು ನೀಡುತ್ತಿರುವುದು ಇಲ್ಲಿ ಜಾತಿ ನೋಡಿ ಹಾಗೂ ರಾಜಕೀಯ ಪಕ್ಷದ ಪ್ರಭಾವ ನೋಡಿ ಹಾಗೂ ಹಣವು ನೀಡಿ ಪ್ರಶಸ್ತಿಗಳನ್ನು ಪಡಿಯಬಹುದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ಗ್ರಾಮೀಣ ಹಿತ ಚಿಂತಕರಾದ ವಿಶ್ವನಾಥ್ ಪೂಜಾರಿ ಕರಕಿಹಳ್ಳಿ ಅವರು ಪ್ರಶಸ್ತಿಗಳ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ