ಯಾದಗಿರಿ: ಬಣಜಿಗ ಸಮಾಜ ನಿರಂತರವಾಗಿ ಎಲ್ಲರ ಏಳ್ಗೆಯನ್ನು ಬಯಸುತ್ತಾ ಬಂದು ತನ್ನ ಹಿತವನ್ನೇ ಮರೆತುಬಿಟ್ಟಿತ್ತು. ಈದೀಗ ಜಿಲ್ಲೆ ರಾಜ್ಯಮಟ್ಟದಲ್ಲಿ ಜಾಗೃತರಾಗುವತ್ತ ಸಂಘಟಿತರಾಗುವತ್ತ ಹೆಜ್ಜೆ ಇರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಿವಬಸಪ್ಪ ಹೆಸರೂರು ಅಬಿಪ್ರಾಯಪಟ್ಟರು.
ನಗರದ ಚಾಮಾ ಫಂಕ್ಷನ್ ಹಾಲ್ ನಲ್ಲಿ ಜರುಗಿದ ಜಿಲ್ಲಾ ಬಣಜಿಗರ ಜಾಗೃತಿ ಚಿಂತನ ಮಂಥನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ವಜನಾಂಗದವರೊಂದಿಗೆ ಹೊಂದಿಕೊಂಡು ಹೋಗುವ ಜಾಯಮಾನದ ಬಣಜಿಗರ ಸಮಾಜ ಇಲ್ಲಿಯವರೆಗೆ ಎಲ್ಲರಿಗಾಗಿ ಶ್ರಮಿಸಿದೆ. ಇದೀಗ ನಮ್ಮ ಸಮುದಾಯದ ಏಳ್ಗೆಗಾಗಿ ಶ್ರಮಿಸುವ ಸಮಯ ಬಂದಿದ್ದು ಇದಕ್ಕಾಗಿ ಎಲ್ಲರೂ ಒಗ್ಗೂಡಿ ಮುಂದಡಿ ಇಡಬೇಕೆಂದು ಸಲಹೆ ನೀಡಿದರು.
ಬಣಜಿಗರ ಸಮಾಜದ ಹಿರಿಯ ಮುಖಂಡ, ಬಸವರಾಜ ಜೈನ್ ಮಾತನಾಡಿ, ಬಣಜಿಗ ಸಮಾಜದ ಒಗ್ಗೂಡಿಸಲು ಕಳೆದ ಹಲವು ದಿನಗಳಿಂದ ನಡೆಸಿದ ಪ್ರಯತ್ನಕ್ಕೆ ಈದೀಗ ಫಲಪ್ರದವಾಗುತ್ತಿದೆ ನಮ್ಮ ಸಮುದಾಯದವರಿಗೆ ಸಿಗಬೇಕಾದ ಸೌಲತ್ತುಗಳು ಒದಗಿಸಿಕೊಡುವುದು ಜೊತೆಗೆ ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಸಮಾಜದ ಮುಖಂಡ, ಕಲ್ಬುರ್ಗಿ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಪ್ರೊ|| ಸಂಜಯ ಮಾಕಲ್ ಮಾತನಾಡಿ ಬಣಜಿಗರು ಎಂದರೆ ವ್ಯಾಪಾರಸ್ಥರು ಎಂದರ್ಥ, ಆದರೆ ನಾವು ಇಂದು ಈ ಹಿಂದೆ ಇದ್ದ ಗತವೈಭವವನ್ನು ಮರೆತು ಸಣ್ಣತನ ಪ್ರದರ್ಶನದಿಂದಾಗಿ ನಮ್ಮಗಳಿಗೆ ಇದ್ದ ಗೌರವ ಕಡಿಮೆಯಾಗಿದೆ ಇದಕ್ಕೆ ಕಾರಣ ನಮ್ಮತನದ ಜಾಗೃತಿ ಕೊರತೆಯೇ ಕಾರಣವಾಗಿದೆ.
ಎಲ್ಲಿಯವರೆಗೆ ನಮ್ಮ ಪ್ರಾಮುಖ್ಯತೆ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಏಳ್ಗೆ ಉದ್ಧಾರ ಆಗುವುದಿಲ್ಲ. ಕರ್ನಾಟಕದಲ್ಲಿ ಒಂದು ಕಾಲದಲ್ಲಿ ವಾರದ ಮಲ್ಲಪ್ಪ ಎಂಬ ದೊಡ್ಡ ಉದ್ಯಮಿ ರಾಜ್ಯದ ಬೆರಳೆಣಿಕೆ ಉದ್ಯಮಿಗಳಲ್ಲಿ ೯ನೇಯವರಾಗಿದ್ದರು. ಆದರೆ ಇಂದು ಯಾವೊಬ್ಬರೂ ಇಲ್ಲದಿರುವುದು ನಮ್ಮ ಸಮುದಾಯ ಅದಃ ಪತನಕ್ಕೆ ಇಳಿದಿರುವುದರ ದ್ಯೋತ್ಯಕವಾಗಿದೆ ಇದಕ್ಕೆ ಜಾಗೃತಿಯ ಕೊರತೆಯೇ ಕಾರಣವಾಗಿದೆ.
ನಮ್ಮ ಸಮುದಾಯದವರು ಇನ್ನುಳಿದ ಮಾರ್ವಾಡಿ, ಮುಸ್ಲಿಮ ಸೇರಿದಂತೆ ಇತರರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅವರೆಲ್ಲಿಯೂ ತಮ್ಮ ಸಮುದಾಯವನ್ನು ಹೊರತು ಪಡಿಸಿ ಬೇರೆಯವರ ದೇವರುಗಳಿಗೆ ಹೋಗಿದ್ದರ ಉದಾಹರಣೆಯೇ ಸಿಗುವುದಿಲ್ಲ. ನಮ್ಮವರು ಕಂಡ ಕಂಡಲ್ಲೆಲ್ಲಾ ಹೋಗುತ್ತಾರೆ ಇದು ಸಣ್ಣ ವಿಚಾರವಲ್ಲ, ಒಂದು ಲೆಕ್ಕದ ಪ್ರಕಾರ ೧೦೦ಕೋಟಿಗೂ ಹೆಚ್ಚು ಹಣ ಅನ್ಯರ ಪಾಲಾಗುತ್ತಿದೆ.
ನಿಮ್ಮ ನಿಮ್ಮ ಮನೆಯ ದೇವರುಗಳ ಗುಡಿಗಳು ಗುಂಡಾರಗಳು ಪಾಳು ಬಿದ್ದಿದ್ದರೂ ಅನ್ಯದೈವಂಗಳಿಗೆ ಹೋಗಿ ಎರಗುವ ಚಾಳಿ ಬಿಡಬೇಕೆಂದು ಅವರು ತಾಕೀತು ಮಾಡಿದರು. ಮೊದಲು ನಿಮ್ಮ ದೇವರು, ಧರ್ಮ, ಗುರು ಹಿರಿಯರು ಸಮಾಜ ಎಂಬ ಪ್ರಜ್ಞೆ ಮೂಡಿಸಿಕೊಳ್ಳಿ ಈ ಹಿಂದೆ ನಮ್ಮ ಸಮಾಜ ಧರ್ಮ, ದೇವರುಗಳ ಆಚಾರ ವಿಚಾರಗಳನ್ನು ಗಟ್ಟಿಯಾಗಿ ಪಾಲಿಸಿಕೊಂಡು ಬಂದ ಪರಿಣಾಮ ನಮ್ಮ ಹಿರಿಯರು ಉನ್ನತ ಬದುಕು ಬಾಳಲು ಸಾಧ್ಯವಾಯಿತು. ಆದರೆ ಇಂದು ಸಮುದಾಯದವರು ಬರಿ ಅನ್ಯಕ್ಕೆರಗುವುದು, ಅನ್ಯಾಯದ ಹಣಕ್ಕಾಗಿ ಹಂಬಲಿಸುವುದು ಬಿಡಬೇಕು ಜಗಳ ವ್ಯಾಜ್ಯಗಳ ಪರಿಹಾರಿ ಅದರಲ್ಲಿ ಲಾಭ ಮಾಡಿಕೊಳ್ಳುವ ಸಣ್ಣ ತನ ಬಿಡಬೇಕು. ಈ ಹಿಂದಿನಂತೆ ಅತ್ಯುತ್ತಮ ಬಣಜಿಗರಾಗಿ ಮುಂದೆ ಬರಬೇಕು.
ದೊಡ್ಡ ದೊಡ್ಡ ಉದ್ದಿಮೆಗಳು ಸ್ಥಾಪಿಸಬೇಕು, ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಳ್ಳಬೇಕು ಆದರೆ ಇದಾವು ದು ಮಾಡದೇ ಸಂಘಟಿತರಾಗದೇ ಇರುವುದರಿಂದ ಎಲ್ಲದರಿಂದ ದೂರವಾಗಿದ್ದೇವೆ. ಧರ್ಮ, ಆಚಾರ ವಿಚಾರಗಳ ಜೊತೆಗೆ ವ್ಯವಹಾರ, ವ್ಯಾಪಾರ ಮಾಡುವುದರಿಂದ ಮತ್ತೆ ಗತವೈಭವ ಪಡೆಯಲು ಸದ್ಯ ಎಂದು ಹೇಳಿದರು.
ವೇದಿಕೆ ಮೇಲೆ ಬನ್ನಪ್ಪ ಸುಂಕದ, ಬಸವಾಜ ಸಾಹು ಸೋನ್ನದ, ವಿಜಯಕುಮಾರ ಪಾಟೀಲ್, ಚಂದ್ರಶೇಖರ ಸುಬೇಧಾರ, ಮಹೇಶ್ವಂದ್ರ ವಾಲಿ, ಮಹೇಶ ಆನೆಗುಂದಿ, ಶರಣಪ್ಪ ಕಲಕೇರಿ, ಮಹೇಶ ಗಂವಾರ, ವೀಣಾ ಮೋದಿ, ಮಲ್ಲಣ್ಣ ಸಾಹು ಮುಧೋಳ, ಇಂದೂಧರ ಸಿನ್ನೂರ, ಬಂದಪ್ಪ ಸಾಹು ಅರಳಿ, ಶರಣಪ್ಪ ಸಾಹು ಬಂಡೊಳ್ಳಿ ಕೆಂಭಾವಿ, ಸುಗುರೇಶ ವಾರದ ಸುರಪುರ, ಬಸಣ್ಣ ದೇಸಾಯಿ ಹುಣಸಗಿ, ಶರಣು ಬಿ. ಪಡೆಶೆಟ್ಟಿ ವಡಗೇರಿ, ದೇವಿಂದ್ರಪ್ಪ ಮಾಲಗತ್ತಿ, ಭೀಮರಾಯ ಸಾಹು ದೇವತ್ಕಲ್, ವೀರೇಶ ನಿಷ್ಟಿ ಇನ್ನಿತರರು ಇದ್ದರು.
ರಾಘವೇಂದ್ರ ಸುಗಂಧಿ ಗೋಗಿ ನಿರೂಪಿಸಿದರು, ಶಂಕ್ರಣ್ಣ ಸಾಹು ಕರಣಿಗಿ ವಂದಿಸಿದರು.
ವರದಿ: ಶಿವರಾಜ ಸಾಹುಕಾರ್, ವಡಗೇರಾ