ಗದಗ:ನಿನ್ನೆ ಸುರಿದ ಮಳೆಯಿಂದಾಗಿ ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಾ ಹೆದ್ದಾರಿ ಯಾವಗಲ್ ಸಮೀಪದ ಬೆಣ್ಣೆ ಹಳ್ಳದ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿ ರೋಣ ಮತ್ತು ನರಗುಂದ ಸಂಪರ್ಕ ಸಂಪೂರ್ಣವಾಗಿ ಸ್ಥಗಿತವಾಗಿದೆ.ಇದರಿಂದಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ.
ತಡವಾಗಿ ಸುರಿದ ಮಳೆಯಿಂದಾಗಿ ಬೆಣ್ಣಿ ಹಳ್ಳದ ದಡದಲ್ಲಿರುವ ಹೊಲಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯನ್ನು ಮಾಡಿದೆ. ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ ಹಾಗೂ ಇದೇ ವಾರದಲ್ಲಿ ಕಡಲೆ, ಜೋಳ ಬಿತ್ತನೆಯಾದ ಹೊಲಗಳಿಗೆ ನುಗ್ಗಿದ ನೀರಿನಿಂದಾಗಿ ರೈತರು ತುಂಬಾ ಕಂಗಾಲಾಗಿದ್ದಾರೆ.
ಸ್ಥಳೀಯ ಹಾಗೂ ತಾಲೂಕಾ ಆಡಳಿತದಿಂದ ನದಿಯ ದಡದಲ್ಲಿರುವ ಗ್ರಾಮದಲ್ಲಿನ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿ ಮಾಡಿದ್ದಾರೆ.
ವರದಿ:ನಾಗರಾಜ ಪ್ರಚಂಡಿ