ಶಿವಮೊಗ್ಗ : ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೈಟ್ ಲಿ. ಅವರ ಸಾಮಾಜಿಕ ಹೊಣೆಗಾರಿಕಾ ಭದ್ರತಾ ನೀತಿ ಅಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಭದ್ರಾವತಿಗೆ ಸುಮಾರು 22 ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್ ಜನರ ಅನುಕೂಲಕ್ಕಾಗಿ ನೀಡಿದ್ದು, ಇಂದು ಉದ್ಘಾಟನೆ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆ ಮಾಡಲಾಯಿತು.
ಇದು ಬಡ ಜನರ ಅನುಕೂಲಕ್ಕಾಗಿ ನೀಡಿದ್ದು 5ವರ್ಷಗಳವರೆಗೆ ಎ ಎಂ ಸಿ ನೀಡಿದ್ದು, ಸುಮಾರು 10ಕೋಟಿ ರೂ ಗಳ ಆರ್ಥಿಕ ಹೊಣೆಯನ್ನು ನಿಭಾಯಿಸುವುದಾಗಿದೆ. (ದಿನಕ್ಕೆ 40 ಜನರಂತೆ 26 ದಿನಗಳು 1500 ರೂ 12 ತಿಂಗಳು5 ವರ್ಷಗಳು)
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಕೆ.ಸಂಗಮೇಶ್ವರ್ ,ಶ್ರೀಮತಿ ಬಲ್ಕೀಶ್ ಭಾನು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಭದ್ರಾವತಿ ತಹಶಿಲ್ದಾರವರು, ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.ಶಾಹಿಯ ಹಿರಿಯ ಅಧಿಕಾರಿಗಳಾದ ಲಕ್ಷ್ಮಣ ಧರ್ಮಟ್ಟಿ, ಎಜಿಎಂ, ಅಡ್ಮಿನ್; ನಾಗಯ್ಯ ಸಿ,ಎಸ್, ಆರ್ ವಿಭಾಗದವರು ಹಾಜರಿದ್ದರು.
ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅನ್ನು ಸರಳಾ ಅಹುಜಾ ರವರು 1974 ರಲ್ಲಿ ಸ್ಥಾಪಿಸಿದರು, ಇದು ಕುಟುಂಬ ಮಾಲೀಕತ್ವದ ಕಂಪನಿಯಾಗಿದ್ದು, ಭಾರತದ ಅತಿದೊಡ್ಡ ಉಡುಪು ತಯಾರಕ ಮತ್ತು ರಫ್ತುದಾರನಾಗಿ ಬೆಳೆದಿದೆ. ಶಾಹಿಯು ಮೂರು ಫ್ಯಾಬ್ರಿಕ್ ಪ್ರೊಸೆಸಿಂಗ್ ಮಿಲ್ ಗಳನ್ನು ಹೊಂದಿದೆ ಮತ್ತು 50ಕ್ಕೂ ಹೆಚ್ಚು ಅತ್ಯಾಧುನಿಕ ಉಡುಪು ತಯಾರಿಕಾ ಘಟಕಗಳನ್ನು ಭಾರತದ 8 ರಾಜ್ಯಗಳಲ್ಲಿ ಹೊಂದಿದೆ, ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ವೈವಿಧ್ಯಮಯ ಉತ್ಪನ್ನ ಶ್ರೇಣಿ ಮತ್ತು ಉತ್ತಮ ಕಾರ್ಯನಿರ್ವಹಣೆ, ಕಠಿಣ ಪರಿಶ್ರಮ ಮತ್ತು ನಿರಂತರತೆಯು ಶಾಹಿಯನ್ನು ವಿಶ್ವದ ಅತ್ಯಂತ ಆದ್ಯತೆಯ ಉಡುಪು ತಯಾರಕರಲ್ಲಿ ಒಬ್ಬರನ್ನಾಗಿ ಮಾಡಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ