ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶ್ರೀ ಶಾಂಭವಿ ದೇವಸ್ಥಾನದಲ್ಲಿ ಸ್ರೀಶಕ್ತಿ ಸಂಘದ ಮಹಿಳೆಯರಿಂದ ಹಾಗೂ ಗ್ರಾಮದ ಸಕಲ ಸದ್ಭಕ್ತಾಧಿಗಳಿಂದ ವಿಜಯದಶಮಿ ಅಂಗವಾಗಿ ಶ್ರೀ ಶಾಂಭವಿ ಮೂರ್ತಿಗೆ ಬಳೆ ಅಲಂಕಾರ ಹಾಗೂ ವಿಶೇಷ ಪೂಜೆ ಹಾಗೂ ಶಾಂಭವಿ ಪುರಾಣ ಮಹಾಮಂಗಲ ಕಾರ್ಯಕ್ರಮ ನೆರವೇರಿತು.
ಶನಿವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದ ಅರ್ಚಕರಿಂದ ಶ್ರೀ ಶಾಂಭವಿ ಮೂರ್ತಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ,ಸಂಕಲ್ಪದೊಂದಿಗೆ ಮತ್ತು ಒಂದು ಸಾವಿರದ ಎಂಟು ಶತನಾಮಾವಳಿ ಪೂಜೆ,ಹಾಗೂ ಅಮೃತಲಿಂಗೇಶ್ವರ ರುದ್ರಾಭಿಶೇಕ ಪೂಜೆ ನೆರವೇರಿಸಲಾಯಿತು.
ಸಂಜೆ ಶ್ರೀ ಶಾಂಭವಿದೇವಿ ಪುರಾಣ ಮಹಾಮಂಗಲ ಕಾರ್ಯಕ್ರಮ, ಮಹಿಳೆಯರಿಗೆ ಬಳೆ ಹಾಗೂ ಕುಂಕುಮಾರ್ಚನೆ,ಉಡಿತುಂಬವ ಕಾರ್ಯಕ್ರಮ ಹಾಗೂ ನಂತರ ಡೊಳ್ಳುವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮಹಾಂಕಾಳಿ ಪೂಜೆ ಸಲ್ಲಿಸಿ ಬನ್ನಿ ಮುಡಿಯಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಪೂಜ್ಯರು,ಶ್ರೀ ಶರಣ ಬಸವೇಶ್ವರ ಸೇವಾ ಸಮಿತಿ ಸದಸ್ಯರು,ಶಕ್ತಿ ಸಂಘದ ಸದಸ್ಯರು,ಊರಿನ ಸಕಲ ಸದ್ಭಕ್ತಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.