ಹೊನ್ನಾಳಿ:ನಮ್ಮ ಸಂಸ್ಕೃತಿ ಬಿಂಬಿಸುವ ಮತ್ತು ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಪಗಡೆ ಆಟದಲ್ಲಿ ಪಾಂಡವರು ಸೋತ ನಂತರ ವನವಾಸದಲ್ಲಿ ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟು ನಂತರ ಅವುಗಳನ್ನು ತೆಗೆದುಕೊಂಡ ದಿವಸ ಹಾಗೆಯೇ ಶ್ರೀರಾಮನು ರಾವಣನನ್ನು ಜಯಿಸಿ ಬಂದು ವಾನರ ಜೊತೆಗೆ ವಿಜಯ ದಿವಸವನ್ನು ಆಚರಿಸಿದ ವಿಜಯದಶಮಿಯ ಸಂಕೇತ ಎಂಬ ಪ್ರತೀಕ ಇದೆ.
ಹೊನ್ನಾಳಿ ತಾಲೂಕು ದಿಡಗೂರಿನಲ್ಲಿ ನವರಾತ್ರಿಯಲ್ಲಿ 9 ದಿನ ಘಟಸ್ಥಾಪನೆ ಮಾಡಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ನೆರವೇರಿಸಿ ಆಯುಧ ಪೂಜೆಯ ನಂತರ ಇಂದು ಶನಿವಾರ ಬನ್ನಿ ಮುಡಿಯಲ್ಲೂ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬನಶಂಕರಿ ದೇವಿ, ಶ್ರೀ ಕಟ್ಟೆ ಅಮ್ಮ ದೇವಿಯ ಮೂರ್ತಿಗಳನ್ನು ಗ್ರಾಮದ ಯುವಕರು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬನ್ನಿ ಮುಡಿಯುವ ಸ್ಥಳಕ್ಕೆ ಆಗಮಿಸಿ ಗ್ರಾಮದ ಭಕ್ತರು ಮತ್ತು ಚಿಕ್ಕ ಮಕ್ಕಳು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮಿಸಿದರು ಬನ್ನಿ ಕೂಟ್ಟು ಬಂಗಾರದಾಂಗೆ ಇರೋಣ ಎಂದು ಒಬ್ಬರಿಗೊಬ್ಬರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.
ವರದಿ ಪ್ರಭಾಕರ್ ಡಿ ಎಂ