ಗದಗ:ಸರ್ಕಾರದ ಮಹತ್ತರ ಯೋಜನೆಯಿಂದ ಗದಗ ಜಿಲ್ಲೆಯ ಮುಳುಗುಂದ ಶಿರಹಟ್ಟಿ ಬೆಳ್ಳಟ್ಟಿ ಪಟ್ಟಣಗಳಿಗೆ ಮತ್ತು ಈ ರಸ್ತೆಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಕೊಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಸರ್ಕಾರ ನೀರಿನ ಸೌಲಭ್ಯವನ್ನು ಪೈಪ್ ಲೈನ್ ಮುಖಾಂತರ ತುಂಗಭದ್ರಾ ನದಿ ದಡದ ಇಟಗಿ ಗ್ರಾಮದಿಂದ ಒದಗಿಸಿತ್ತು ಆದರೆ ಈ ಒಂದು ಯೋಚನೆಯ ಪ್ರಯೋಜನವು ಕೆಲವೇ ದಿನಗಳು ಮಾತ್ರ ಎಲ್ಲಾ ಪಟ್ಟಣ ಮತ್ತು ಗ್ರಾಮಗಳಿಗೆ ದೊರಕಿತ್ತು ಆದರೆ ಈಗ ಇದೇ ಮಾರ್ಗದಲ್ಲಿ ರಾಜ್ಯದ ರಸ್ತೆಯಂದು ನಿರ್ಮಾಣ ಮಾಡಿದ್ದು ಎಲ್ಲಾ ಪೈಪ್ ಲೈನ್ ಗಳನ್ನು ಎಲ್ಲೆಂದರಲ್ಲಿ ಕಿತ್ತು ಬಿಸಾಡಿದ್ದು ಇದರಿಂದ ಎಲ್ಲಾ ಪಟ್ಟಣ ಗ್ರಾಮಗಳಿಗೂ ಕುಡಿಯುವ ನೀರಿನ ಯೋಜನೆಯಿಂದ ವಂಚಿತವಾಗಿ ಈ ಯೋಜನೆಗೆ ಸರ್ಕಾರ ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳು ವ್ಯರ್ಥವಾಗಿ ಮುಂದಿನ ದಿನಮಾನಗಳಲ್ಲಿ ಜನರಿಗೆ ನೀರಿನ ಸಮಸ್ಯೆಗೂ ಕೊನೆಯಿಲ್ಲದಂತಾಗಿದೆ ಇದಕ್ಕೆ ಯಾರು ಹೊಣೆ ಕೂಡಲೇ ಇಲ್ಲಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದಕ್ಕೆ ಉತ್ತರ ತಿಳಿಸಬೇಕಾಗಿದೆ ಇಲ್ಲವಾದಲ್ಲಿ ಪ್ರತಿ ಗ್ರಾಮದ ಮತ್ತು ಪಟ್ಟಣದ ಜನರು ಮುಂದಿನ ದಿನಮಾನಗಳಲ್ಲಿ ಚಳುವಳಿಯ ಮುಖಾಂತರ ನಿಮಗೆ ಎಚ್ಚರಿಸುವ ಸಂದೇಶವಿದು.
ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಮಸ್ತ ಗ್ರಾಮದ ಜನರು ಅಗ್ರಹಿಸಿದ್ದಾರೆ.
ವರದಿ : ಸತೀಶ ಗೋಡಿ