ಉತ್ತರ ಕನ್ನಡ/ಮುಂಡಗೋಡ: ದಿನಾಂಕ:-19/10/2024 ರಂದು ಕಾತೂರ ವಲಯದ ಚಳಗೇರಿ ಶಾಖೆಯ ಚಿಪಗೇರಿ ಗಸ್ತು ವ್ಯಾಪ್ತಿಯಲ್ಲಿ ಬರುವ ಚಿಪಗೇರಿ ಅರಣ್ಯ ಸ,ನಂ 8 ರ ಬ್ಲಾಕ್ & ಕಂ ನಂಬರ XVIII-28ರ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಒಂದು ಒಣಗಿದ ಸಾಗವಾನಿ ಮರವನ್ನು ಕಡಿದು 6 ತುಂಡುಗಳನ್ನಾಗಿಸಿ ದಾಸ್ತಾನು ಮಾಡಿದ್ದು, ಗಮನಕ್ಕೆ ಬಂದಂತೆ, ಜಾನು ಕೊಂಡು ಪಾಟೀಲ್ ಸಾ// ರಾಜೀವಾಡ ತಾ// ಯಲ್ಲಾಪುರ ಇವನನ್ನು ದಸ್ತಗಿರಿ ಮಾಡಿ ದಾಸ್ತಾನು ಇಟ್ಟಿದ್ದ ಸಾಗ ನಗ 6=1.327 ಘ,ಮೀ ನಾಟಾ ಹಾಗೂ ಜಲಾವು 1.00 ಘ,ಮೀ ವನ್ನು ಜಪ್ತು ಪಡಿಸಿ ಪ್ರಥಮ ಗುನ್ನಾ ವರದಿ ಸಂಖ್ಯೆ 11/2024-25 ದಿನಾಂಕ:-19/10/2024 ರಂತೆ ಗುನ್ನೆ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ. ಜಪ್ತು ಪಡಿಸಿದ ಮಾಲಿನ ಕಿಮ್ಮತ್ತು ಅಂದಾಜು 1,50,000 ರೂ, ಆಗಿರುತ್ತದೆ.
ಸದರಿ ಕಾರ್ಯಾಚರಣೆಯನ್ನು ಮಾನ್ಯ ಶ್ರೀ ಹರ್ಷಾಭಾನು ಜಿ.ಪಿ ಭಾ.ಅ.ಸೇ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಲ್ಲಾಪುರ ವಿಭಾಗ, ಯಲ್ಲಾಪುರ ಹಾಗೂ ಮಾನ್ಯ ಶ್ರೀ ರವಿ ಎಮ್ ಹುಲಕೋಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮುಂಡಗೋಡ ಉಪ ವಿಭಾಗ ಮುಂಡಗೋಡ ರವರ ಮಾರ್ಗದರ್ಶನದಲ್ಲಿ ಕಾತೂರ ವಲಯ ಅರಣ್ಯಾಧಿಕಾರಿ ಶ್ರೀ ವೀರೇಶ, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಮಂಜುನಾಥ ಆನಿಯವರ, ಶ್ರೀ ದೀಪಕ ಜಾಬುರೆ, ಗಸ್ತು ಅರಣ್ಯ ಪಾಲಕರಾದ ಶ್ರೀ ಲಕ್ಷ್ಮಣ ಉಗ್ಗನವರ, ಶ್ರೀ ಮಂಜುನಾಥ ಶಿವಣ್ಣನವರ ಹಾಗೂ ಕ್ಷೇಮಾಭಿವೃದ್ದಿ ನೌಕರ ಶ್ರೀ ಮಲ್ಲಪ್ಪ ಕಸಳ್ಳಿ ರವರು ಭಾಗವಹಿಸಿರುತ್ತಾರೆ.