ವಿಜಯನಗರ ಜಿಲ್ಲಾ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಕರ್ನಾಟಕ ಪಬ್ಲಿಕ್ (ಪ್ರಾಥಮಿಕ) ಶಾಲೆಯಲ್ಲಿ ಇಂದು ಕೊಟ್ಟೂರಿನ ಅಗ್ನಿಶಮಾಕ ಠಾಣೆಯಿಂದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಬೆಂಕಿ ಅವಘಡಗಳು, ಅದರ ವಿಧಗಳು ಮತ್ತು ಅಗ್ನಿ ಶಮನದ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ಕೊಟ್ಟೂರು ಅಗ್ನಿ ಶಾಮಕ ಠಾಣಾಧಿಕಾರಿಗಳಾದ ಬಸವರಾಜ್ ಇವರು ಉಪನ್ಯಾಸ ನೀಡಿದರು.
ಕೊಟ್ಟೂರು ಅಗ್ನಿ ಶಾಮಕ ಠಾಣಾ ತಂಡದವರಾದ ಲಕ್ಷ್ಮಯ್ಯ, ಶ್ರೀಕಾಂತ್, ಸಿದ್ದಾರ್ಥ್, ವೆಂಕಟೇಶ್, ಮತ್ತು ಮನೋಜ್ ಇವರು ಅಣಕು ಪ್ರದರ್ಶನ
ಮಾಡಿ ತೋರಿಸಿದರು. ಮಕ್ಕಳು ಮನೋರಂಜನೆಯೊಂದಿಗೆ ನೀರಿನ ಬುಗ್ಗೆಗಳನ್ನ ಕಂಡು ಮೈ ನವೀರೇಳಿಸುವ ಕಾರ್ಯಗಳಿಗೆ ಮಕ್ಕಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಟಿ ಶಿವರುದ್ರಪ್ಪ, ಎಸ್ ಡಿ ಎಂ ಸಿ ಸದಸ್ಯರಾದ ಹೆಚ್ ಎಂ ಈಶ್ವರಯ್ಯ, ಶಾಲೆಯ ಮುಖ್ಯ ಗುರುಗಳಾದ ತಿಪ್ಪೇಸ್ವಾಮಿ ಇವರು ಅಗ್ನಿ ಅವಘಡಗಳ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು,
ಸಹ ಶಿಕ್ಷಕರಾದ ಮಂಜುನಾಥ, ಎಂ ಜಾತಪ್ಪ, ಪಂಪಾಪತಿ, ಹುಲುಗಪ್ಪ, ಕೊಟ್ರೇಶ, ಸಿದ್ದೇಶ್, ಪರಶುರಾಮ್, ವೀರೇಶ, ಪ್ರಕಾಶ, ಸಹ ಶಿಕ್ಷಕಿಯರಾದ ನಾಗವೇಣಿ, ಲೀಲಾವತಿ, ಅಕ್ಕಮಹಾದೇವಿ, ಈ ಸಂದರ್ಭದಲ್ಲಿ ಮಹಾಲಕ್ಷ್ಮಿ, ಹಂಪಮ್ಮ, ಶಿವಲೀಲಾ, ರೇಣುಕಾ, ಸಿಬ್ಬಂದಿಗಳು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ