ಮುಂಡಗೋಡ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ಪರಿಣಾಮ ಎರಡು ಬಾರಿ ವ್ಯಕ್ತಿಯೊಬ್ಬರ ಖಾತೆಯಲ್ಲಿನ ಹಣವನ್ನು ವಂಚಕರು ಎಗರಿಸಿದ್ದು, ಒಟ್ಟಾರೆ ಸುಮಾರು 58,000 ರೂಪಾಯಿಗಳ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ವ್ಯಕ್ತಿ ಖಾತೆ ಇರುವ ಬ್ಯಾಂಕ್ ನವರಿಗೆ ಹಾಗೂ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದು ಹಣ ಕಳೆದುಕೊಂಡ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿದ್ದು, ಹೆಸರು ಹೇಳಲು ಇಚ್ಚಿಸಲಿಲ್ಲ, ಮೊಬೈಲ್ ವಾಟ್ಸಾಪ್ ಗೆ ಬರುವ ವಂಚನೆಯ ಎಪಿಕೆ ಫೈಲ್ ಕ್ಲಿಕ್ ಮಾಡಿದರೆ ಖಾತೆಯಲ್ಲಿನ ಹಣ ಗೊತ್ತಿಲ್ಲದೆ ಮಂಗ ಮಾಯವಾಗುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತು ತಾಲೂಕಿನಲ್ಲಿ ಹೆಚ್ಚಾಗುತ್ತಿದ್ದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕೂಡಾ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುತ್ತಿದೆಯಾದರು , ಮೊಬೈಲ್ ಗೆ ಬರುವ ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಏನುತ್ತಾರೆ ಸೈಬರ್ ತಜ್ಞರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.