ಪ್ರತಿಯೊಬ್ಬ ಯುವಕರು ಭ್ರಷ್ಟಾಚಾರಿಗಳಿಗೆ ಪ್ರಶ್ನೆ ಮಾಡಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾವು ನೀವೆಲ್ಲರೂ ಪ್ರಯತ್ನಿಸಬೇಕಿದೆ :ಹಂಸವಾಹಿನಿ ಸಂಗೀತ ಉಪನ್ಯಾಸಕ ಸಿದ್ದಲಿಂಗ ಮಾಹೊರ
ಕಲಬುರಗಿ/ಜೇವರ್ಗಿ:
ಪ್ರತಿಯೊಂದು ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಅನೈತಿಕತೆ ತಾಂಡವಾಡುತ್ತಿದೆ ಎಂದು ಹಂಸವಾಹಿನಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಿದ್ದಲಿಂಗ ಮಾಹೊರ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಈ ಕಾರ್ಯಕ್ರಮದ ಕುರಿತು ಮಾತನಾಡಿದರು ಇತ್ತೀಚಿನ ವಿದ್ಯಾಮಾನಗಳನ್ನು ಗಮನಿಸಿದರೆ ಭ್ರಷ್ಟಾಚಾರ ಪ್ರತಿಯೊಂದು ಇಲಾಖೆಯಲ್ಲಿ ಸಂಬಳದ ಜೊತೆ ಪರ್ಸೆಂಟೇಜ್ ಕಮಿಷನ್ ಗೆ ಕೈ ಚಾಚುವ ಭಿಕ್ಷುಕರಿಗೆ ನಾವು ನೀವೆಲ್ಲರೂ ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿವೆ ಆದರೆ ಇದುವರೆಗೆ ಪ್ರತಿಯೊಂದು ಹಳ್ಳಿಗಳಲ್ಲಿ ರಸ್ತೆ ಸುಧಾರಣೆಯಾಗಿಲ್ಲ ಹೈ ಟೆಕ್ ಶೌಚಾಲಯದ ವ್ಯವಸ್ಥೆ ಇಲ್ಲ ಪ್ರತಿ ಹಳ್ಳಿಯಲ್ಲಿ ಬಯಲು ಶೌಚಾಲಯ ಗತಿಯಾಗಿದೆ ಇಂತಹ ಅನಾಗರಿಕ ವ್ಯವಸ್ಥೆಯಲ್ಲಿ ಪಂಚಾಯತ ಗುಮಾಸ್ತನಿಂದ ಹಿಡಿದು ಕ್ಲಾಸ್ ಒನ್ ಅಧಿಕಾರಿಯವರಿಗೆ ಭ್ರಷ್ಟಾಚಾರವಿಲ್ಲದೆ ಕೆಲಸವಾಗುವುದು ಇತ್ತೀಚಿನ ದಿನಮಾನಗಳಲ್ಲಿ ಕಷ್ಟಕರವಾಗಿದೆ ಅದೇ ರೀತಿಯಾಗಿ ಹಲವಾರು ಸರಕಾರಿ ನಿಗಮಗಳಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಕೆಲಸವಾಗುತ್ತಿದೆ ಲಕ್ಷಾಂತರ ಬಡವರಿಗೆ ಸಿಗಬೇಕಾದ ಸರಕಾರಿ ಸೌಲಭ್ಯಗಳು ಮಧ್ಯವರ್ತಿಗಳ ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ ಕಮಿಷನ್ ಕೊಟ್ಟವರಿಗೆ ಕೆಲಸವಾಗುತ್ತಿವೆ ಇಂಥಹ ಹೇಯ ಅನಾಗರಿಕ ಅವ್ಯವಸ್ಥೆಯ ವಿರುದ್ಧ ಪ್ರತಿಯೊಬ್ಬ ಯುವಕರು ಭ್ರಷ್ಟಾಚಾರಿಗಳಿಗೆ ಪ್ರಶ್ನೆ ಮಾಡುವ ಗಂಡು ಗುಂಡಿಗೆಯನ್ನು ಬೆಳೆಸಿಕೊಳ್ಳಬೇಕಿದೆ ರೌಡಿಗಳಿಗೆ ಪುಡಾರಿಗಳಿಗೆ ಸಲಾಂ ಹೊಡೆಯುವ ಗುಲಾಮಿ ಮನಸ್ಥಿತಿಯಿಂದ ಪ್ರತಿಯೊಬ್ಬ ಯುವಕರು ಹೊರ ಬರಬೇಕಿದೆ ಹಾಗೂ ಜಾತಿ ಜಾತಿ ನಡುವೆ ಜಗಳ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಯವಂಚಕರಿಂದ ನಾವೆಲ್ಲಾ ಜನಜಾಗೃತಿ ಮೂಡಿಸಬೇಕಿದೆ ಅದೇ ರೀತಿಯಾಗಿ ವೋಟಿಗಾಗಿ ನೋಟು ಕೊಡುವ ನರಿ ಬುದ್ಧಿಯ ನಯವಂಚಕರಿಗೆ ಇಂದಿನ ವಿದ್ಯಾವಂತ ಯುವಕರು ತಿರಸ್ಕಾರ ದೃಷ್ಟಿಯಿಂದ ತಿರಸ್ಕರಿಸಬೇಕಿದೆ ಈ ವಿಷಯದ ಕುರಿತು ವಿಚಾರವಂತಹ ಯುವಕರಿಂದ ಜನಜಾಗೃತಿ ಸಮಾವೇಶ ನಡೆಯಬೇಕಿದೆ ಅದೇ ರೀತಿಯಾಗಿ ಇಷ್ಟೆಲ್ಲಾ ಸಂಘ-ಸಂಸ್ಥೆಗಳು ಪತ್ರಿಕಾ ಮಾಧ್ಯಮಗಳು ಹಾಗೂ ಮೀಡಿಯಾಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರು ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತಿಲ್ಲ. ಆದರೆ ಮುಂದಿನ ಯುವ ಪೀಳಿಗೆಯ ಭವಿಷ್ಯದ ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಬ್ಬ ಯುವಕರು ಭ್ರಷ್ಟಾಚಾರಿಗಳನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ ಎಂದು ಜೇವರ್ಗಿ ತಾಲೂಕಿನ ಹಂಸವಾಹಿನಿ ಖ್ಯಾತ ಉಪನ್ಯಾಸಕರಾದ ಸಿದ್ದಲಿಂಗ ಮಾಹೊರ್ ಅವರು ಜೇವರ್ಗಿ ಹಂಸವಾಹಿನಿ ಕಚೇರಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರ ಬಳಗದಲ್ಲಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಗಿರೀಶ್ ತುಂಬಗಿ, ಎಂ ಜೆ ಪ್ರಜ್ವಲ್, ಎಮ್ ಜೆ ಗಣೇಶ್, ಭುವನ್ ಹಿರೇಮಠ, ಈಶಣ್ಣ ಗೌಡ, ಸಮೀರ್, ಭೀಮಶಂಕರ್ ಹೂಗಾರ್, ಸುಶೀಲ್ ಸೇರಿದಂತೆ ಇನ್ನಿತರ ಸ್ನೇಹಿತ ಬಳಗದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.