ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ರೈತ ಸಂಘದ ಪದಾಧಿಕಾರಿಗಳ ನೇಮಕ

ರೈತರು ಒಗ್ಗಟ್ಟಾಗಿ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡಿದಾಗ ಮಾತ್ರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಅಧಿಕಾರಗಳು ಕೆಲಸ ಮಾಡುತ್ತಾರೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದ ಮುಂದಿನ ಮಠದಲ್ಲಿ ರೈತ ಸಂಘದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚೂನ್ನಪ್ಪ ಪೂಜಾರಿ ಮತ್ತು ರಾಜ್ಯ ಕಾರ್ಯಾಧ್ಯಕ್ಷರಾದ ಮಹೇಶ್ ಗೌಡ ಎಂ ಸುಬೇದಾರ್ ಇವರ ಆದೇಶದ ಮೇರೆಗೆ ಶಹಾಪುರ ತಾಲೂಕಿನ ದೋರನಹಳ್ಳಿ ಹೋಬಳಿ ಘಟಕದ ಗೌರವ ಅಧ್ಯಕ್ಷರಾಗಿ ವೇದಮೂರ್ತಿ ಶ್ರೀ ಆನಂದ್ ಗುರೂಜಿಯವರನ್ನು ರಾಜ್ಯ ಯುವ ಸಂಚಾಲಕರು ಹಾಗೂ ಯಾದಗಿರಿ ಜಿಲ್ಲಾ ಕಾರ್ಯದರ್ಶಿಗಳಾದ ದೇವಿಂದ್ರಪ್ಪಗೌಡ.ವಿ ಪೊಲೀಸ ಪಾಟೀಲ ಮಾಲಗತ್ತಿಯವರು ಹಸಿರು ಶಾಲು ಹೊದಿಸಿ ನೇಮಕ ಮಾಡಿ ಮಾತನಾಡಿದರು ರೈತ ಸಂಘಟನೆಯು ಯಾವುದೇ ಜಾತಿಗೆ, ಯಾವುದೇ ರಾಜಕೀಯ ಪಕ್ಷಗಳಿಗೆ ಸೀಮಿತವಲ್ಲ, ನಮ್ಮದು ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುವ ಸಂಘಟನೆ ಅದು ರೈತ ಸಂಘಟನೆ ಈ ನಿಟ್ಟಿನಲ್ಲಿ ಎಲ್ಲಾ ರೈತರು ಒಗ್ಗಟ್ಟಾಗಿ ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡಿದಾಗ ಮಾತ್ರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ಸರಿಯಾದ ರೀತಿ ಕಾರ್ಯ ಪ್ರವೃತ್ತರಾಗಿ ಕೆಲಸ ಮಾಡುತ್ತಾರೆ , ಮುಂಗಾರು ಹಂಗಾಮಿನ ಬೆಳೆಗಳು ಬಂದಿದ್ದು ಬರುತ್ತಿದ್ದು ಸರ್ಕಾರ ಮತ್ತು ಜಿಲ್ಲಾಡಳಿತವು ಹತ್ತಿ , ತೊಗರಿ, ಹೆಸರು, ಖರೀದಿ ಕೇಂದ್ರಗಳನ್ನು ತುರ್ತಾಗಿ ಆರಂಭಿಸಬೇಕೆಂದು ಮಾಧ್ಯಮ ಮೂಲಕ ಸರಕಾರಗಳಿಗೆ ಒತ್ತಾಯಿಸಿದರು, ಮುಂದುವರೆದು ದೋರನಹಳ್ಳಿ ಹೋಬಳಿ ಘಟಕದ ಗೌರವ ಅಧ್ಯಕ್ಷರಾಗಿ ಆಯ್ಕೆ ಆಗಿರುವ ವೇದಮೂರ್ತಿ ಶ್ರೀ ಆನಂದ್ ಗುರೂಜಿ ಅವರು ಮತ್ತು ನಾಲಡಿಗಿ ಗ್ರಾಮ ಘಟಕದ ಅಧ್ಯಕ್ಷರಾಗಿ ಮಾಳಪ್ಪ ತಂದೆ ಮುನಿಯಪ್ಪ ಗ್ರಾ.ಪಂ ಸದಸ್ಯ ಮತ್ತು ಉಪಾಧ್ಯಕ್ಷರಾಗಿ ಸಾಹೇಬ್ ಗೌಡ ತಂದೆ ಮೋನಪ್ಪ ಆಯ್ಕೆ ಮಾಡಲಾಯಿತು ನೀವುಗಳು ಸಂಘಟನೆ ತತ್ವ ಸಿದ್ಧಾಂತದ ಅಡಿಯಲ್ಲಿ ಪ್ರಾಮಾಣಿಕವಾಗಿ ರೈತರ ಹಿತವನ್ನು ಕಾಯುವ ದೃಷ್ಟಿಯಲ್ಲಿ ಕೆಲಸವನ್ನು ಮಾಡಬೇಕು ಮತ್ತು ಹೆಚ್ಚಿನ ರೀತಿಯಲ್ಲಿ ರೈತರನ್ನು ಜಾಗೃತಿ ಮಾಡಿ ಸಂಘಟನೆಗೆ ಕರೆತರುವ ಪ್ರಯತ್ನಮಾಡಬೇಕು,ಎಲ್ಲರೂ ಒಗ್ಗಟ್ಟಾಗಿ ರೈತರ ಸಮಸ್ಯೆಗಳಿಗೆ ರಾಜ್ಯ, ಜಿಲ್ಲೆ, ತಾಲೂಕು , ಗ್ರಾಮ ಘಟಕದ ಎಲ್ಲಾ ಪದಾಧಿಕಾರಿಗಳು ಹೋರಾಟ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಸಾಹುಕಾರ ಬಲಕಲ್ , ಸುರಪುರ ತಾಲೂಕಿನ ರೈತ ಮುಖಂಡರಾದ ಶಿವನಗೌಡ ಬಿರಾದರ್ , ಬಸನಗೌಡ ಕಮತಿಗಾ ಸೂಗೂರು, ಚಟ್ನಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಮಹಾದೇವರಡ್ಡಿ ಸಗರ, ಉಪಾಧ್ಯಕ್ಷರಾದ ಬಸವರಾಜಪ್ಪ ತಂಗಡಗಿ, ರೈತ ಮುಖಂಡರಾದ ಹನುಮಂತರಾಯ ಸಗರ್ ಮರಮಕಲ್ ಗ್ರಾಮ ಘಟಕದ ಅಧ್ಯಕ್ಷರಾದ ಈಶಪ್ಪ ಗೌಡ, ಗುರಣ್ಣ ಸಾಹುಕಾರ್ ಮತ್ತು ವಿಜಯ್ ಕುಮಾರ್ ಸಾಹುಕಾರ್ ಗ್ರಾಮ್ ಪಂಚಾಯತ್ ಸದಸ್ಯರು ಬಲಕಲ್, ಚಟ್ನಳ್ಳಿ ಗ್ರಾಮದ ಸೋಮಯ್ಯ ಸ್ವಾಮಿ ಹಿರೇಮಠ, ನಾಗರೆಡ್ಡಿ ಗೌಡ ದೇಸಾಯಿ, ಮುಂದಿನ ಮಠದ ಹಲವಾರು ಜನ ಭಕ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ: ಶಿವರಾಜ ಸಾಹುಕಾರ್, ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ