ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಕೀಟಗಳು ಹರಡಿದ್ದು ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತಿವೆ ಆದ್ದರಿಂದ ಆಲದ ಮರವನ್ನು ಮಗುವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಿರುವ ನಮ್ಮ ವನಸಿರಿ ಫೌಂಡೇಶನ್ ತಂಡ ಆಲದ ಮರಕ್ಕೆ ರಾಸಾಯನಿಕ ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಮಗುವಿನಂತೆ ಪೋಷಣೆ ಮಾಡಲಾಗುತ್ತಿದೆ ಎಂದು ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ತಿಳಿಸಿದರು.
ದಿನಾಂಕ 26-05-2022 ರಂದು ವನಸಿರಿ ಫೌಂಡೇಶನ್ ವತಿಯಿಂದ ಅಮರ ಶ್ರೀ ಆಲದ ಮರವನ್ನು ನೆಟ್ಟು,ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಅಮರ ಶ್ರೀ ಎಂದು ನಾಮಕರಣ ಮಾಡಿ,ನಂತರ ಪ್ರತಿವರ್ಷ ಮೇ 5ರಂದು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಾ ಬಂದಿದ್ದು,ಮಗುವಿನಂತೆ ಪಾಲನೆ ಪೋಷಣೆ ಮಾಡುತ್ತಿದ್ದೇವೆ.ಸದ್ಯ ಇದೀಗ ಆಲದ ಮರಕ್ಕೆ ಕೀಟಗಳು ಹರಡಿದ್ದು ಎಲೆಗಳ ಚಿಗುರುಗಳನ್ನು ತಿಂದು ಹಾಕುತ್ತಿವೆ.ಮನೆಯಲ್ಲಿ ಮಗುವನ್ನು ಯಾವರೀತಿ ಲಾಲನೆ ಪೋಷಣೆ ಮಾಡುತ್ತೇವೆಯೋ ಅದೇ ರೀತಿ ಈ ಮರವನ್ನು ಗಿಡ ನೆಟ್ಟಾಗಿನಿಂದ ಇಲ್ಲಿಯವರೆಗೂ ಪೋಷಣೆ ಮಾಡುತ್ತಿದ್ದೇವೆ. ಈಗ ಎಲೆಗಳನ್ನು ತಿಂದುಹಾಕುತ್ತಿರುವುದನ್ನು ಗಮನಿಸಿ ಇವತ್ತು ಎಲೆಗಳಿಗೆ ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದೇವೆ.ಇವತ್ತು ತಮ್ಮ ಕುಟುಂಬಕ್ಕಾಗಿ ಆರ್ಥಿಕತೆ ಹೊಂದುವ ದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಎಷ್ಟೋ ಜನರನ್ನು ನಾವುಗಳು ನೋಡುತ್ತಿದ್ದೇವೆ.ಅವರಲ್ಲಿ ಉದ್ಯಮಿಗಳು,ಶ್ರೀಮಂತಿಕೆಯನ್ನು ಗಳಿಸಬೇಕೆಂಬುವವರನ್ನು ನೋಡಿದ್ದೇವೆ ಆದರೆ ಇವತ್ತು ತಮ್ಮ ಜೀವನವನ್ನೇ ಪರಿಸರ ಸೇವೆಗಾಗಿ ಮುಡುಪಾಗಿಟ್ಟುಕೊಂಡಿರುವ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಇಂತಹ ದಿನಮಾನಗಳಲ್ಲಿ ಯಾವುದೇ ರೀತಿಯ ಫಲಪೇಕ್ಷೇಗಳನ್ನು ಹೊಂದಿದೆ ಸಂಸ್ಥೆಗೂ ಯಾವುದೇ ಲಾಭಾಂಶಗಳನ್ನು ಹೊಂದಿದೆ,ಹಗಲಿರುಳೆನ್ನದೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.ಎಲೆಗಳು ಕಂದುಬಣ್ಣಕ್ಕೆ ತಿರಿಗಿರುವುದಕ್ಕೆ ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ ಮಾಡಲು ಸ್ವತಃ ತಾವೇ ಮುಂದೆ ನಿಂತು ಈ ಕಾರ್ಯವನ್ನು ನಿರ್ವಹಿಸಿ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದಾರೆ.ಇವತ್ತು ವನಸಿರಿ ಸಂಸ್ಥೆ ಕೇವಲ ತನ್ನ ಸ್ವಾರ್ಥಕ್ಕಾಗಿ ಕಾರ್ಯವನ್ನು ಮಾಡುತ್ತಿಲ್ಲ,ಗಿಡಮರಗಳು ಬೆಳೆಯಬೇಕು,ಗಿಡಮರಗಳು ಉಳಿಯಬೇಕು,ಪರಿಸರವನ್ನು ಉಳಿಸಬೇಕು ಎಂದು ಪಣತೊಟ್ಟು ಸೇವೆಯಲ್ಲಿ ತೊಡಗಿದೆ.ಯಾವುದೇ ಫಲಾಪೇಕ್ಷವಿಲ್ಲದೇ ಪರಿಸರ ಸೇವೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಬಯಸುತ್ತೇವೆ ಎಂದು ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ ಹೊಸಹಳ್ಳಿ ತಿಳಿಸಿದರು.