ಶಿವಮೊಗ್ಗ: ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾದ್ಯಕ್ಷರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ್ಯಾಲಯ ಇತ್ತಿಚೆಗೆ ಅಸ್ತಿತ್ವಕ್ಕೆ ಬಂದಿದೆ.ನೂತನ ಪತ್ರಕರ್ತರ KWJV ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯತ್ವ ಹೊಂದಿದ ಪತ್ರಕರ್ತರಿಗೆ ಇಂದು ಅಧಿಕೃತವಾಗಿ ಜಿಲ್ಲಾ ಅಧ್ಯಕ್ಷರಾದ ಡಿ.ಜಿ.ನಾಗರಾಜ್ ರವರು ಐಡಿ ಕಾರ್ಡ್ ವಿತರಣೆ ಮಾಡಿ ಸದಸ್ಯರಿಗೆ ಶುಭ ಕೋರಿದರು.
ಸದರಿ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ ಇಂದು ಶನಿವಾರ ಸಂಜೆ ದುರ್ಗಿಗುಡಿ 3 ನೇ ಕ್ರಾಸ್, ಭರಣಿ ಕಾಂಪ್ಲೆಕ್ಸ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸದಸ್ಯರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷರು ಸಂಘಟನೆಗೆ ಒತ್ತು ನೀಡುವಂತೆ ತಿಳಿಸಿದರು.ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ
ತಾರಮ್ಯವಿಲ್ಲದೇ,ಬೇದಭಾವ ಇಲ್ಲದೇ,ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲಾ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್,ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ ಎಂದರು.
ಈ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ .ಅದಕ್ಕೆ ನಮ್ಮ ಹತ್ತಿರ ಟೈಮ್ ಸಹ ಇರುವುದಿಲ್ಲ ನಮ್ಮ ಉದ್ದೇಶ ಒಟ್ಟಾಗಿ ಪತ್ರಕರ್ತರ ಶ್ರೇಯೋ ಅಭಿವೃದ್ದಿ,ಹಿತಕಾಯುವ ಕೆಲಸ ಮಾಡೋಣ,ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸೋಣ ಎಂದರು.
ದಿನಪತ್ರಿಕೆ,ವಾರಪತ್ರಿಕೆ,fortnightly,
ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿ ಯೊಂಧಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು ಎಂದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ