ಕಿಟ್ನ್ನು ಸಮರ್ಪಕವಾಗಿ ಬಳಸಿಕೊಳ್ಳಿ : ಮಲ್ಲಪ್ಪ ಬಾದರ್ಲಿ
ಸಿಂಧನೂರು :ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ವಿತರಿಸಲಾಗಿರುವ ಕಿಟ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ವೈಯಕ್ತಿಕ ಸ್ವಚ್ಛತೆ ಮತ್ತು ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಶಾಲಾ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒರ್ಯಾಕಲ್ ಕಂಪನಿಯ ಧನಸಹಾಯದಡಿಯಲ್ಲಿ ಬೆಂಗಳೂರು ಮೂಲದ ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಶಾಲಾ ಬಾಲಕಿಯರಿಗೆ ‘ಶುಚಿತ್ವ ಹಾಗೂ ಆರೋಗ್ಯ ಕಿಟ್’ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ, ಕಂಪನಿ ನೆರವಿನಿಂದ ನಮ್ಮ ಶಾಲೆಯ ಎಲ್ಲಾ ಹೆಣ್ಣು ಮಕ್ಕಳಿಗೆ ಶುಚಿತ್ವ ಮತ್ತು ಆರೋಗ್ಯ ಸಂವರ್ಧನಾ ಕಿಟ್ನ್ನು ನೀಡಲಾಗಿದೆ. ಶಾಲೆಯ ಬಾಲಕಿಯರು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಇಂದು ವಿತರಿಸಲಾಗಿರುವ ಕಿಟ್ನಲ್ಲಿ ಆರೋಗ್ಯ ವೃದ್ಧಿಗೆ ಬೇಕಾಗಿರುವ ಗೋಡಂಬಿ, ಬಾದಾಮಿ ಪೌಷ್ಟಿಕಾಂಶದ ಡ್ರೆöÊಫ್ರೂಟ್ಸ್, ವೈಯುಕ್ತಿಕ ಸ್ವಚ್ಛತೆಗೆ ಬೇಕಾಗಿರುವ ಸ್ಯನಾಟರಿ ಪ್ಯಾಡ್, ಪೇಸ್ಟ್-ಬ್ರಷ್, ಸಾಮಗ್ರಿಗಳು, ಡೈರಿ, ಲೇಖನ ಸಾಮಗ್ರಿಗಳು ಒಳಗೊಂಡಂತೆ ಆರೋಗ್ಯ ಮತ್ತು ಸ್ವಚ್ಛತೆ ಸಂಬಂಧಿಸಿದ ವಿವಿಧ ಸಾಮಗ್ರಿಗಳು ಸೇರಿವೆ ಎಂದು ಕಾರ್ಯಕ್ರಮ ಸಂಯೋಜಕರಾದ ಕಾಶಯ್ಯ ಹಿರೇಮಠ ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ದಿ ಸೇವಾ ಸಮಿತಿಯ ದಯಾನಂದ ಸ್ವಾಮಿ, ಶರಣೇಗೌಡ ಪೋಸ್ಟ್ ಹಳೇಮನಿ, ಎಸ್.ಡಿ.ಎಮ್.ಸಿಯ ಶರಣಪ್ಪ ಲಿಂಗದಳ್ಳಿ, ಸೋಮಲಿಂಗಪ್ಪ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕರಾದ ಮಹಾಂತೇಶ ಜಿ ಕೆ, ಶಾಲೆಯ ಶಿಕ್ಷಕರಾದ ವೀರೇಶ ಗೋನವಾರ, ರವಿಚಂದ್ರ, ಸುಭಾಷ ಪತ್ತಾರ, ಎಂ.ಮಾರುತಿ, ಬಸವರಾಜ, ರೂಪಾ ಸೇರಿದಂತೆ ಇತರರು ಇದ್ದರು.
ತರಬೇತಿ : ಇದೇ ಸಂದರ್ಭದಲ್ಲಿ ಶಾಲಾ ಬಾಲಕಿಯರಿಗೆ ಉತ್ತಮ ಆರೋಗ್ಯ, ವೈಯುಕ್ತಿಕ ಸ್ವಚ್ಛತೆ ಕುರಿತು ತರಬೇತಿ ನೀಡಿದರು ಮತ್ತು ಬಾಲಕರಿಗೆ ಆರೋಗ್ಯ, ವೈಯುಕ್ತಿಕ, ಹದಿ ಹರೆಯದ ಸಮಸ್ಯೆಗಳಿಗೆ ಪರಿಹಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಹಸೀನಾ ಬಾನು, ಜಯಶ್ರೀ ಮಾಹಿತಿ ನೀಡಿದರು.
ಸ್ವಚ್ಛತೆ :
ಸಂಸ್ಥೆಯ ಶಾಲಾ ಆವರಣವನ್ನು ‘ಸ್ಚಚ್ಛತಾ ಸೇವಾ’ ಕಾರ್ಯಕ್ರಮದಡಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಸ್ಚಚ್ಛತೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.