ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಕೌದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಾಮಿತ್ವ (ಡ್ರೋನ್ ಸರ್ವೇ) ಯೋಜನೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಶಾಸಕ ಎಂ.ಆರ್. ಮಂಜುನಾಥ್ ನಂತರ ಮಾತನಾಡಿದ ಅವರು
ಸ್ವಾಮಿತ್ವ ಯೋಜನೆಯು ಒಂದು ಅನುಕೂಲಕರ ಯೋಜನೆ ಇದನ್ನು ಗ್ರಾಮಸ್ಥರು ಉಪಯೋಗ ಪಡೆದು ಕೊಳ್ಳಬೇಕು ಹಾಗೆಯೇ ಸರ್ವೇ ಮಾಡಲು ತಂಡ ರಚಿಸುದ್ದೇವೆ ಅವರು ತಮ್ಮ ತಮ್ಮ ಮನೆಗಳಿಗೆ ಹಾಗೂ ಜಮೀನಿಗೆ ಸರ್ವೇ ಮಾಡಲು ಬಂದಾಗ ಒಳ್ಳೆಯ ರೀತಿಯಲ್ಲಿ ಸಹಕರಿಸಬೇಕು ಈ ಯೋಜನೆಯಿಂದ ಜಮೀನು ಹಾಗೆಯೇ ಮನೆಯ ಮಾಲೀಕರಿಗೆ ಪಿ ಆರ್ ಸಿ ಕಾರ್ಡ್ ಕೊಡಲಾಗುತ್ತದೆ,ಹಾಗೆಯೇ ಡ್ರೋನ್ ಸಹಾಯ ದಿಂದ ನಕ್ಷೆ ತಗೆದು ಸರ್ವೇ ಮಾಡಲಾಗುತ್ತದೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ತದನಂತರ ಸಂತ ಅಂತೋಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿ ಗೆ ಭೇಟಿ ನೀಡಿದ ಶಾಸಕರು ಕಾಲೇಜು ಕಾಂಪೌಂಡ್ ಹತ್ತಿರ ಹರಿಯುತ್ತಿರುವ ಚರಂಡಿ ನೀರನ್ನು ಸ್ವಚ್ಚತೆ ಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಸರ್ವೆ ಸೂಪರಿಂಟೆಂಡೆಂಟ್ ಚೇತನ್, ಎಡಿ,ಎಲ್,ಆರ್, ನಟರಾಜ್,ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಧಾ,ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ಆಕಾಶ್,ಗ್ರಾಮ ಪಂಚಾಯಿತಿ ಸದಸ್ಯರಾದ ನಬಿ ಖಾನ್,ಮಾದಪ್ಪ,ಜಬಿವುಲ್ಲಾ,ಸೈಯದ್ ಸಮಿವುಲ್ಲಾ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ, ಮುಖಂಡರುಗಳಾದ ರಾಚಪ್ಪ,ಸೈಯದ್ ಜೇಸಿಮ್ ಪಾಷಾ,ಚಿನ್ನ ವೆಂಕಟ,ಎಸ್ ಆರ್ ಮಹಾದೇವ್, ಜಯರಾಮ್,ಡಿ ಕೆ ರಾಜು,ಕೌಸರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್