ಕೊಪ್ಪಳ:ಸ್ವಾತಂತ್ರ್ಯ ಹೋರಾಟಗಾರ ಮತ್ತು ಏಕೀಕರಣದ ರೂವಾರಿ ಸರ್ದಾರ್ ವಲ್ಲಭಾಯಿ ಪಟೇಲ್ ಎಂದು ಪ್ರಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಸ್ವಾತಂತ್ರ ನಂತರ ನಮ್ಮ ದೇಶದ ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿದರು. ಇವರು ನಮ್ಮ ಹೈದರಾಬಾದ್ ಕರ್ನಾಟಕವನ್ನು ನಿಜಾಮರ ಆಳ್ವಿಕೆಯಿಂದ, ರಜಾಕಾರರ ಆಳ್ವಿಕೆಯಿಂದ ಮುಕ್ತಿಗೊಳಿಸಿದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ವಿತೋಬ ಎಸ್ ಅವರು ಮಾತನಾಡುತ್ತ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ದೇಶದ ಮೊದಲ ಉಪ ಪ್ರಧಾನಿ ಆಗಿ ಉತ್ತಮ ಆಡಳಿತ ನೀಡಿದರು. ಇಂದು ನಮ್ಮಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು. ನಮ್ಮಲ್ಲಿ ಒಗ್ಗಟ್ಟು ಮತ್ತು ಐಕ್ಯತೆ ಇರಬೇಕು. ಇಂದು ಅತೀ ಹೆಚ್ಚು ಉನ್ನತ ಶಿಕ್ಷಣ ಪಡೆದವರಲ್ಲಿ, ಸಂಶೋಧನೆ ಮಾಡಿದವರಲ್ಲಿ ಐಕ್ಯತೆ, ಒಗ್ಗಟ್ಟು ಭಾವನೆ ಕಡಿಮೆ ಆಗುತ್ತಿದೆ ಹಾಗೂ ಮೂಢನಂಬಿಕೆಗಳು ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ಭೋದಕರಾದ ಡಾ. ಪ್ರದೀಪ್ ಕುಮಾರ್ ಯು ಅವರು ಮಾತನಾಡುತ್ತ ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರು. ಹೈದರಾಬಾದ್ ನಿಜಾಮ್ ಮೇಲೆ ಯುದ್ಧ ಮಾಡಿ ನಮ್ಮ ಭಾಗವನ್ನು ದೇಶದಲ್ಲಿ ವಿಲೀನಗೊಳಿಸಿಸದರು. ದೇಶದ ಮೊದಲ ಗ್ರಹ ಮಂತ್ರಿ ಆಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಹುಲಿಗೆಮ್ಮ ಬಿ, ಡಾ. ಮಲ್ಲಿಕಾರ್ಜುನ ಬಿ, ಡಾ. ನರಸಿಂಹ, ಡಾ. ಅಶೋಕ ಕುಮಾರ, ಹನುಮಪ್ಪ, ಮಹಿಬೂಬ್, ಮಲ್ಲಿಕಾರ್ಜುನ, ಲಕ್ಷ್ಮಿ, ರುಕ್ಕಮ್ಮ, ಗವಿಸಿದ್ದಪ್ಪ ಅಜ್ಜ ಉಪಸ್ಥಿತರಿದ್ದರು.
ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಕೊಪ್ಪಳದ ಹಿರಿಯ ಸಾಹಿತಿ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಅವರಿಗೆ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದರಿಂದ ಕಾಲೇಜು ವತಿಯಿಂದ ಅವರಿಗೆ ಅಭಿನಂದನೆಗಳುನನ್ನು ತಿಳಿಸಲಾಯಿತು.
ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಬಿ ನಿರೂಪಿಸಿ, ವಂದಿಸಿದರು.