ಕೋಲಾರ/ಶ್ರೀನಿವಾಸಪುರ : ವಿಜಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕಾಲೇಜಿನ ಯುವಕರ ತಂಡ ಆಕರ್ಷಕವಾದ ಕರ್ನಾಟಕ ನಕ್ಷೆಯ ಚಿತ್ರವನ್ನು ಬಿಡಿಸಿ ಮೊದಲನೇ ಸ್ಥಾನ ಪಡೆದುಕೊಂಡರು.
69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಹೊರ ವಲಯದ ಶ್ರೀ ವಿಜಯಾದ್ರಿ ವಿದ್ಯಾ ಸಂಸ್ಥೆಯ ಪಿ ಯು ಕಾಲೇಜಿನಲ್ಲಿ ರಂಗೋಲಿ ಸ್ಪರ್ಧೆ ಹಾಗೂ ಇನ್ನಿತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಯುವತಿಯರು ಸೇರಿದಂತೆ ಯುವಕರು ಭಾಗವಹಿಸಿದ್ದು ವಿಶೇಷವಾಗಿದ್ದು, ಭಾಗವಹಿಸಿದ್ದ ಯುವಕರ ತಂಡ ಒಂದು ಕರ್ನಾಟಕ ನಕ್ಷೆಯನ್ನು ಸುಂದರವಾಗಿ ಹಾಗೂ ಆಕರ್ಷಕವಾಗಿ ಬಿಡಿಸಿ ಕಾಲೇಜು ಆಡಳಿತ ಮಂಡಳಿಯಿಂದ ಪ್ರಥಮ ಸ್ಥಾನ ಪಡೆದುಕೊಂಡು ಬಹುಮಾನ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಕಾಲೇಜು ಪ್ರಾoಶುಪಾಲ ಶಿವಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ವಿಶೇಷ ಕೌಶಲ್ಯ ಪ್ರತಿಭೆ ತುಂಬುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ರಂಗೋಲಿ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ತಮ್ಮ ಪ್ರತಿಭೆ ತೋರಿದ್ದು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿದರು.
ಈ ವೇಳೆ ಮಾತನಾಡಿದ ಕನ್ನಡ ಉಪನ್ಯಾಸಕ ಎನ್ ಚಲಪತಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಕನ್ನಡಿಗರ ನಾಡ ಹಬ್ಬವಾಗಿದ್ದು ಕರ್ನಾಟಕದ ಪ್ರತಿಯೊಬ್ಬರೂ ಹೆಮ್ಮೆ ಪಡುವಂತಹ ದಿನವಾಗಿದೆ ಅದೇ ರೀತಿಯಾಗಿ ವಿಜಯಾದ್ರಿ ಶಾಲೆಯಲ್ಲಿ ಬಹಳ ಸಡಗರದಿಂದ ಹಬ್ಬವನ್ನು ಆಚರಣೆ ಮಾಡುತ್ತಿರುವುದಾಗಿ ಈ ಹಬ್ಬದ ದಿನ ಶಾಲಾ ವಿದ್ಯಾರ್ಥಿಗಳಿಂದ ರಂಗೋಲಿ ಸ್ಪರ್ಧೆ ನೃತ್ಯ ಗಾಯನ ಇನ್ನೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಪ್ರಾoಶುಪಾಲ ಶಿವಕುಮಾರ್, ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಬಾಬುಗೌಡ, ಕನ್ನಡ ಉಪನ್ಯಾಸಕ ಎನ್ ಚಲಪತಿ,ವೆಂಕಟ ರಾಮರೆಡ್ಡಿ ಇನ್ನಿತರ ಉಪನ್ಯಾಸಕ ವೃಂದದವರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.