ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡು ಇರುವ ಪುರಾತನ ಬಸವನ ಹೊಂಡ ಮುಂಡಗೋಡ ನಗರದ ಸಾರ್ವಜನಿಕ ಹಾಗೂ ಮನೆಗಳಲ್ಲಿ ಕೂರಿಸುವ ಗಣಪತಿ ವಿಗ್ರಹ ವಿಸರ್ಜನೆ ಮಾಡುವ ಪ್ರಮುಖ ತಾಣವಾಗಿದೆ.ಆದರೆ ಇತ್ತೀಚಿಗೆ ಗಣೇಶ ಚತುರ್ಥಿಯ ಸಾರ್ವಜನಿಕ ಗಣಪತಿಗಳ ವಿಸರ್ಜನೆ ಬಳಿಕ ಮಣ್ಣು ನೀರಿನಲ್ಲಿ ಕರಗಿ ದೊಡ್ಡ ದೊಡ್ಡ ಕಟ್ಟಿಗೆಗಳೂ ಹೊಂಡದಲ್ಲಿ ಹಾಗೆ ಉಳಿದುಕೊಂಡಿವೆ ಮತ್ತು ಸಾರ್ವಜನಿಕರು ದೇವರ ಪೂಜಾ ಸಾಮಗ್ರಿಗಳನ್ನು. ಪ್ಲಾಸ್ಟಿಕ್ ನಲ್ಲಿ ಕಟ್ಟಿ ಹೊಂಡದಲ್ಲಿ ಎಸೆಯುತ್ತಿರುವುದರಿಂದ ಕೆರೆಯಲ್ಲಿ ಪ್ಲಾಸ್ಟಿಕ್ ಚೀಲಗಳ ಸಂಖ್ಯೆ ಹೆಚ್ಚಾಗಿ ನೀರು ಪಾಚಿಗಟ್ಟಿ ವಾಸನೆ ಬರುತ್ತಿದೆ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಅವರು ಹೊಂಡವನ್ನು ಹಾಗೂ ಬೆಳೆದಿರುವ ಕಸಕಂಟಿಯನ್ನು ಸ್ವಚ್ಚಮಾಡಬೇಕು ಎಂದು ಪ್ರತಿನಿತ್ಯ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
ಜಲ ಮೂಲಗಳು, ಕಲ್ಯಾಣಿಗಳು,ಕೆರೆಕಟ್ಟೆಗಳು ಪರಿಸರ ಅವಿಭಾಜ್ಯ ಅಂಗ ಅವುಗಳನ್ನು ಸಂರಕ್ಷಿಸಿ, ಉಳಿಸಬೇಕಾದ ಮಹತ್ತರ ಜವಾಬ್ದಾರಿ ಇಲಾಖೆಗಳ ಮೇಲೆ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರ ಮೇಲು ಇದೆ, ಸಾರ್ವಜನಿಕರು ಪ್ರಜ್ಞಾವಂತರಾಗಿ ದೇವರ ಫೋಟೋಗಳು,ಸೇರಿದಂತೆ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಎಸೆಯುವುದನ್ನು ನಿಲ್ಲಿಸಿ ಜವಾಬ್ದಾರಿ ಮೆರೆಯಬೇಕೆಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ