ಬೆಂಗಳೂರು : ಹೊರರಾಜ್ಯದವರಿಗೆ ಕನ್ನಡ ಕಲಿಸಬೇಕು ಮತ್ತು ಅವರೊಂದಿಗೆ ಕನ್ನಡದಲ್ಲೇ ವ್ಯವಹರಿಸಿದಾಗ ಮಾತ್ರ ಕನ್ನಡ ಭಾಷೆಯ ಸಂರಕ್ಷಣೆ ಸಾಧ್ಯ ಎಂದು ಕೆನರಾ ಬ್ಯಾಂಕ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ಬಿ ಪಾರ್ಶ್ವನಾಥ ರವರು ಕರೆ ನೀಡಿದರು. ಶ್ರೀಯುತ ಪಾರ್ಶ್ವನಾಥರವರು ಬೆಂಗಳೂರಿನ ಅಕ್ಷಯನಗರದ ವಿಂಡ್ಸರ್ ಟ್ರೋಯಿಕ ಅಪಾರ್ಟ್ ಮೆಂಟ್ ಕನ್ನಡ ಬಳಗದವರು ಕನ್ನಡ ಆಯೋಜಿಸಿದ್ದ ಧ್ವಜಾರೋಹಣ ಮತ್ತು ನಾಡ ಗೀತೆ ನಿತ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇತರೆ ಭಾಷೆಗಳನ್ನು ಕಲಿಯುವುದು ತಪ್ಪೇನಿಲ್ಲ ಆದರೆ ನಮ್ಮ ನಾಡಿನಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸದಿರುವುದು ಅತಿ ದೊಡ್ಡ ತಪ್ಪು ಎಂದರು. ಧ್ವಜಾರೋಹಣದ ನಂತರ ನಾಡು-ಗೀತೆ ನಿತ್ಯೋತ್ಸವ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದಲ್ಲಿ ದಯಾನಂದ ಶೆಟ್ಟಿ, ಭಟ್ ಜೀ, ವಿಕಾಸ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಧು ಪಾರ್ಶ್ವನಾಥ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್