ಮಕ್ಕಳು ಚಿಕ್ಕವರಿದ್ದಾಗಲೇ ಆದರ್ಶ ಆಚಾರ ವಿಚಾರ ಸಂಸ್ಕೃತಿಗಳನ್ನು ತಿಳಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಬಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಆದಂತಹ ಶ್ರೀಮತಿ ಕರಿಬಸಮ್ಮ ಹಾಗೂ ಸಹಾಯಕಿಯಾದಂತಹ ಶ್ರೀಮತಿ ಚಂದ್ರಮ್ಮ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ಅಳವಡಿಸಿಕೊಂಡು ಗಾದೆಗಳು ವೇದಗಳಿಗೆ ಸಮಾನವಾಗಿದೆ ಗಾದೆಗಳು ಹಿರಿಯರು ನುಡಿದ ನುಡಿಮುತ್ತುಗಳಾಗಿವೆ ಈ ಮಾತು ತುಂಬಾ ಅರ್ಥಪೂರ್ಣವಾದಂತ ಗಾದೆ ಮಾತಾಗಿದೆ ಎಂದು ಹೇಳಿದರು.
ರೈತ ಹೊಲದಲ್ಲಿ ಬೀಜ ಬಿತ್ತಿದ ನಂತರ ಮೂರು ನಾಲ್ಕು ದಿನಗಳಲ್ಲಿ ಆ ಬೀಜ ಮೊಳಕೆಯಾಗಿ ಬೆಳೆಯಲು ಪ್ರಾರಂಭಿಸುತ್ತದೆ , ಚಿಕ್ಕ ಸಸಿ ಇದ್ದಾಗಲೇ ರೈತ ಕಸ ಮತ್ತು ಬೇಡವಾದ ಗಿಡಗಳನ್ನು ತೆಗೆದುಹಾಕುತ್ತಾನೆ, ಅದೇ ರೀತಿ ಮಕ್ಕಳಲ್ಲಿ ಗುಣ ಮತ್ತು ಅವ ಗುಣಗಳನ್ನು ಗಮನಿಸಬೇಕು ಮಕ್ಕಳಲ್ಲಿ ಅವಗುಣಗಳು ಕಂಡು ಬಂದಲ್ಲಿ ತಿದ್ದಬೇಕು ಮಗು ಬಾಲ್ಯದಲ್ಲಿ ಇರುವಾಗಲೇ ನಾವು ಉತ್ತಮ ಆಚಾರ ವಿಚಾರ ಸಂಸ್ಕೃತಿಗಳನ್ನು ಕಲಿಯಬಹುದು ಕಲಿಯದೇ ಇರಬಹುದು ಬಾಲ್ಯದಲ್ಲಿಯೇ ಮಕ್ಕಳ ಹವಾಗುಣಗಳನ್ನು ಗುರುತಿಸಿ ತಿದ್ದಬೇಕು,
ನಾವು ಇತಿಹಾಸವನ್ನು ನೋಡಿದಾಗ ಅಂಬೇಡ್ಕರ್, ಗಾಂಧೀಜಿ, ಬಾಲಗಂಗಾಧರ್ ತಿಲಕ್, ಬಸವಣ್ಣನವರು ಇನ್ನು ಮುಂತಾದ ಮಹಾನ್ ವ್ಯಕ್ತಿಗಳು ಬಾಲ್ಯದಲ್ಲಿಯೇ ಉತ್ತಮ ಗುಣಗಳನ್ನು ರೂಪಿಸಿಕೊಂಡು ಬಂದವರು ಹಾಗಾಗಿ ಅವರು ಉತ್ತಮ ಆದರ್ಶ ವ್ಯಕ್ತಿಗಳಾದರು.
ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡಬೇಕೆಂದು ಕಲ್ಲಳ್ಳಿ ಗ್ರಾಮದ ಬಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಆದಂತಹ ಶ್ರೀಮತಿ ಕರಿಬಸಮ್ಮ ನವರು ಹಾಗೂ ಸಹಾಯಕಿ ಆದಂತಹ ಶ್ರೀಮತಿ ಚಂದ್ರಮ್ಮ ನವರು ಮಕ್ಕಳಲ್ಲಿ ಹರಿವನ್ನು ಮುಡಿಸುವುದು ನಮ್ಮ ಆದ್ಯತೆ ಬಾಧ್ಯತೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವರದಿ : ಗುರುರಾಜ್ ಎಲ್, ಕಲಹಳ್ಳಿ ಟಿ