ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ,ಗಬ್ಬೆದ್ದು ನಾರುತ್ತಿದೆ ಕುಗ್ರಾಮಗಳಿಗೆ ಡಿಸಿ ಸಿಇಓ ಭೇಟಿ ನೀಡಲಿ: ಉಮೇಶ ಮುದ್ನಾಳ ಆಗ್ರಹ

ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ,ಗಬ್ಬೆದ್ದು ನಾರುತ್ತಿದೆ ಕುಗ್ರಾಮಗಳಿಗೆ ಡಿಸಿ ಸಿಇಓ ಭೇಟಿ ನೀಡಲಿ: ಉಮೇಶ ಮುದ್ನಾಳ ಆಗ್ರಹ

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಯಾದಗಿರಿ ಮತಕ್ಷೇತ್ರದ ಗೋನಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಂಗಡಿ ಸೂಗೂರ್, ಶಿವಪುರ, ಗುಡ್ಲೂರ್, ಗ್ರಾಮಗಳಲ್ಲಿ ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ಇನ್ನೂ ಅಭಿವೃದ್ಧಿ ಕಾಣದೇ ಗಬ್ಬೆದ್ದು ನಾರುತ್ತಿದೆ.

ಗ್ರಾಮಕ್ಕೆ ಇರುವ ಪ್ರಮುಖ ರಸ್ತೆಯುದ್ದಕ್ಕೂ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಗ್ರಾಮಗಳಲ್ಲಿ ತಮಟೆ ಚಳುವಳಿ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಹಳ್ಳ ಹಿಡಿದಿದೆ. ಶಾಲೆಗೆ ಮೂಲಭೂತ ಸೌಕರ್ಯಗಳಾದ ಶಾಲೆ ಕಾಂಪೌಂಡ್, ಚರಂಡಿ ಶುಧ್ಧ ಕುಡಿಯುವ ನೀರು ಹಾಗೂ ಸಿಸಿ ರಸ್ತೆ ಇರದ ಕಾರಣದಿಂದಾಗಿ ಈ ಎಲ್ಲಾ ಗ್ರಾಮಗಳಲ್ಲಿ ಶಾಲೆಗಳು ಶೀಥಿಲಗೊಂಡಿರುವುದರಿಂದ ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ ಮಾಡುವ ಪರಿಸ್ಥಿತಿ ಬಂದಿದೆ.

ಗ್ರಾಮಸ್ಥರು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೇ ಗ್ರಾಮಸ್ಥರು ಗಲಿಜು ಗೊಜ್ಜಲಿನಲ್ಲಿಯೇ ತಿರುಗಾಡುವ ವ್ಯವಸ್ಥೆ ಸೃಷ್ಟಿಯಾಗಿದ್ದರೂ ಕ್ಯಾರೆ ಎನ್ನದೇ ಇದ್ದುದರಿಂದ ತಮ್ಮ ಗಮನಕ್ಕೆ ತಂದಿದ್ದರಿಂದ ಇಂದು ಬೆಳಗ್ಗೆ ಗ್ರಾಮಗಳಿಗೆ ಭೇಟಿ ನೀಡಿ ನೋಡಿದಾಗ ಅಚ್ಚರಿಯಾಗುವಂತಾಯಿತು.

ಚರಂಡಿ ನೀರು ರಸ್ತೆ ಮೇಲೆ ಹರಿದು ಗಬ್ಬೆದ್ದು ಗ್ರಾಮವೇ ನಾರುವಂತಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ ಎಂದು ಅವರು ದೂರಿದರು.

ಜನರು ದೇವಸ್ಥಾನಕ್ಕೆ ಹೋಗಲು ಶುಚಿತರಾಗಿ ಹೋಗುತ್ತಾರೆ ಆದರೆ ಈ ಗ್ರಾಮದಲ್ಲಿ ಊರ ಹೊಲಸಿನ ಮದ್ಯೆಯೇ ದಾಟಿಕೊಂಡು ಮಲಿನವಾಗಿ ದೇವಸ್ಥಾನಕ್ಕೆ ಹೋಗುವ ಪರಿಸ್ಥಿತಿ ಇದೆ. ಗ್ರಾಮದಿಂದ ಯಾರೊಬ್ಬರೂ ಹೊರಗೆ ಹೋಗಬೇಕೆಂದರೂ ಇದೇ ರಸ್ತೆಯಲ್ಲಿಯೇ ತೆರಳಬೇಕು ಜಾತ್ರೆಗಳ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತವರು ದೀಡ ನಮಸ್ಕಾರ ಹಾಕಬೇಕೆಂದರೆ ನರಕದ ದಾರಿಯಲ್ಲಿ ಸಾಗಿ ಹೋಗಬೇಕು ಮತ್ತೆ ಮತ್ತೆ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ.

ಎತ್ತುಬಂಡಿ, ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುವಾಗಿ ಹೊಲಸಿನಲ್ಲಿ ಬಿದ್ದು ಸಂಕಷ್ಟ ಎದುರಿಸುವುದು ಸಂಗತಿಯಾಗಿದೆ. ಶುದ್ಧ ಕುಡಿವ ನೀರು ತರಬೇಕೆಂದರೂ ಹೊಲಸಿನಲ್ಲಿಯೇ ಸಾಗಬೇಕಿದೆ.

ಲಕ್ಷ ಲಕ್ಷ ರೂ. ಗಳು ಗ್ರಾಮದ ಅಭಿವೃದ್ಧಿಗೆ ಬಂದ ಹಣ ಯಾರ ಮನೆಯ ತಿಜೋರಿ ಸೇರಿದೆ ಎಂಬುದು ಅರ್ಥವಾಗದ ಪರಿಸ್ಥಿತಿ ಗ್ರಾಮದಲ್ಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಯಾವೊಂದು ಗ್ರಾಮವೂ ಈ ರೀತಿ ಹದಗೆಟ್ಟಿಲ್ಲ ಎಂಬುದು ನಮ್ಮಗಳ ಗಮನಕ್ಕೆ ಬಂದಿದ್ದು, ಈ ದೃಶ್ಯವನ್ನು ಡಿಸಿ ಸಿಇಒ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜು, ಶರಣು, ಅಯ್ಯಣ್ಣ, ದಾವೂದ್ ಪಾಟೀಲ್, ಸೈದಪ್ಪ, ಬನ್ನಯ್ಯ ಸ್ವಾಮಿ, ಸಾಬಣ್ಣ ಪೂಜಾರಿ, ನಾಗರಾಜ್, ಭಾಷಾ ಪಾಟೀಲ್, ಸೂಗುರ್, ರವಿಕುಮಾರ್, ಬಿಮಣ್ಣ ದೋರಿ, ಬಸವರಾಜ್, ಶರಣಪ್ಪ, ಮರೆಪ್ಪ, ಬಸವಂತ, ಮಲ್ಲಿಕಾರ್ಜುನ್ ಗೌಡ, ಶಿವಪುರ ಗ್ರಾಮ, ಶಿವುಕುಮಾರ, ಪ್ರಭು, ಹಮತೆಪ್ಪ, ಮರೆಪ್ಪ, ಬಸಯ್ಯ ಸ್ವಾಮಿ, ಸೈದಪ್ಪ, ದೇವು, ಖಾಜಾ ಪಟೇಲ್, ಇಸ್ಮಾಯಿಲ್ ಪಟೆಲ್, ಸೈಯದ್ ಅಲಿ ಸಾಹುಕಾರ್, ಫಜಲ್ ಪಟೇಲ್ ಇದ್ದರು.

ವರದಿ: ಶಿವರಾಜ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ