ಸಿಂದಗಿ: ತಾಲೂಕಿನ ಜನತೆಗೆ ಒಳ್ಳೆಯದಾಗಲಿ, ಸರಕಾರದ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಸಿಂದಗಿ ಕೃಷಿ ಇಲಾಖೆಯ ಸಹಯೋಗದಲ್ಲಿ ೨೦೨೪-೨೫ನೆಯ ಸಾಲಿನ ಜಲಾನಯನ ಅಭಿವೃದ್ಧಿ ಇಲಾಖೆಯ ಆರ್.ಡಿ.ಎ-ಆರ್.ಕೆ.ವಿ.ವಾಯ್-ಆರ್.ಎ.ಎಫ್.ಟಿ.ಎ.ಎ.ಆರ್ ಯೋಜನೆಯಡಿಯಲ್ಲಿ ಹಸು ವಿತರಣಾ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಹಮ್ಮಿಕೊಂಡ ಮಂಜೂರಾತಿ ಪತ್ರ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಮತ್ತು ಜೀವನದ ಉಪಯೋಗಕ್ಕಾಗಿ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಹಸು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಸಿಂದಗಿ ಮತಕ್ಷೇತ್ರದ ಗೋಲಗೇರಿ ಗ್ರಾ.ಪಂ. ಯನ್ನು ಗೋಲಗೇರಿ, ಡಂಬಳ, ಅಲ್ಲಾಪೂರ, ಸಾಸಾಬಾಳ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಉಳಿದ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆಮಾಡಲಾಗುವುದು. ತಾಲೂಕು ಇಂದು ನೀರಾವರಿಯಿಂದ ಕೂಡಿದೆ. ಹೈನುಗಾರಿಕೆಯಿಂದ ಕೃಷಿಯಲ್ಲಿ ಸಾಧನೆ ಮಾಡಬಹುದು. ಹೈನುಗಾರಿಕೆಯಿಂದ ನಮ್ಮ ಜೀವನವನ್ನೇ ರೂಪಿಸಿಕೊಳ್ಳಬಹುದು. ಹಸು ಖರೀದಿಗಾಗಿ ಸರಕಾರ ೩೦ ಸಾವಿರ ರೂ.ಅನುದಾನವನ್ನು ನೀಡುತ್ತದೆ. ರೈತರೆಲ್ಲರೂ ಹಸುವನ್ನು ಖರೀದಿ ಮಾಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶಿವಪ್ಪಗೌಡ ಬಿರಾದಾರ, ಕೆಡಿಪಿ ಸದಸ್ಯ ಗಂಗಾಧರ ಚಿಂಚೋಳ್ಳಿ, ಮಲ್ಲಣ್ಣ ಸಾಲಿ ಮಾತನಾಡಿ, ಶಾಸಕರು ಸಿಂದಗಿ ತಾಲೂಕಿಗೆ ಶಾಶ್ವತ ಯೋಜನೆಗಳನ್ನು ತೆಗೆದುಕೊಂಡು ಬಂದು ತಮಗೆ ಸಲ್ಲಿಸುತ್ತಿದ್ದು, ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಗೋಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ೫೦ಜನ ಪಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಹೆಚ್.ವಾಯ್.ಸಿಂಗೇಗೋಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಅಬ್ದುಲ್ ರಜಾಕ್ ಮೊಮೀನ, ಭಾಗಪ್ಪಗೌಡ ಪಾಟೀಲ, ರವಿರಾಜ ದೇವರಮನಿ, ಕೆಡಿಪಿ ಸದಸ್ಯರಾದ ನಿಂಗಣ್ಣ ಬುಳ್ಳಾ, ಅಯ್ಯಪ್ಪ ಕಟ್ಟಿಮನಿ, ಸುರೇಶ ಚೌಧರಿ, ಮಡಿವಾಳ ನಾಯ್ಕೋಡಿ, ಮೂದಿಗೌಡ ಬಿರಾದಾರ ಸೇರಿದಂತೆ ತಾಲೂಕಿನ ರೈತರು ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.
-ಖಾದರಬಾಷ ಮೇಲಿನಮನಿ