ಬೀದರ್: ಶ್ರೀ ಶಿವಕುಮಾರೇಶ್ವರ ಗುರುಕುಲ ಎಚ್.ಪಿ. ಶಾಲೆಯಲ್ಲಿ ಇತ್ತೀಚೆಗೆ “ಇಂಟರ್ನೆಟ್ ಸುರಕ್ಷತೆ” ವಿಷಯದಲ್ಲಿ ಒಂದು ಪ್ರಾಫೆಷನಲ್ ತರಗತಿ ನಡೆಸಲಾಯಿತು. ಈ ತರಗತಿಯನ್ನು ದಯಾನಂದ ಹಿರೇಮಠ ಹಾಗೂ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನೋಲಾಜೀಸ್ ಸಹಯೋಗದಲ್ಲಿ ಆಯೋಜಿಸಲಾಯಿತು.
ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಬಳಕೆಯ ಸುರಕ್ಷತೆಯ ಮಹತ್ವ, ಆನ್ಲೈನ್ ಅಪಾಯಗಳು, ಸಾಮಾಜಿಕ ಮಾಧ್ಯಮದಲ್ಲಿ ಖಾಸಗಿ ಮಾಹಿತಿಯನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಆನ್ಲೈನ್ ಕ್ರೈಮ್‌ಗಳು ಕುರಿತು ಅಗತ್ಯ ಜಾಗೃತಿ ನೀಡಲಾಯಿತು. ದಯಾನಂದ ಹಿರೇಮಠ ಅವರು ಈ ವಿಷಯದಲ್ಲಿ ವಿಶಿಷ್ಟವಾದ ಮಾರ್ಗದರ್ಶನವನ್ನು ನೀಡಿ, ಇಂಟರ್ನೆಟ್ ಮತ್ತು ತಂತ್ರಜ್ಞಾನಗಳ ಸುರಕ್ಷಿತ ಬಳಕೆ ಕುರಿತು ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಡೆಲ್ ಟೆಕ್ನೋಲಾಜೀಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್‌ನ ದಯಾನಂದ ಹಿರೇಮಠ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ರೈಂಗಳನ್ನು ಗುರುತಿಸಲು ಹಾಗೂ ಅದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಬಗ್ಗೆ ವಿವರಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೈಬರ್ ಜಾಗೃತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ, ಹಾಗೂ ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸುವ ಕುರಿತು ಮಾರ್ಗದರ್ಶನ ನೀಡಿದುದರಿಂದ ಅವರ ವೈಯಕ್ತಿಕ ಮಾಹಿತಿ ಹಾಗೂ ಸುರಕ್ಷತೆ ಕಾಪಾಡುವ ಬಗ್ಗೆ ಮಹತ್ವದ ಅರಿವು ಮೂಡಿಸಿತು.