ಮೈಸೂರು: ಮೈಸೂರಿನ ಅಗ್ರಹಾರ ವಾರ್ಡಿನ ರಾಮಾನುಜ ರಸ್ತೆ ೯ ನೇ ತಿರುವಿನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಿರುವುದರಿಂದ ಪಕ್ಕದಲ್ಲೇ ವಾಸಿಸುವ ಪರಿಶಿಷ್ಟ ಜಾತಿಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ತೇಜಸ್ವಿ ನಾಗಲಿಂಗ ಸ್ವಾಮಿ ಇದೊಂದು ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿ ಎಂದು ತಿಳಿಸಿದರು.
ರಾಮಾನುಜ ರಸ್ತೆಯ ೭ , ೮ , ೯, ರಿಂದ ಬರುವ ನೀರು ಸರಾಗವಾಗಿ ರಾಜಕಾಲುವೆಗೆ ಹೋಗುವಂತೆ ಕಾಮಗಾರಿ ಮಾಡಬೇಕಿತ್ತು.ಆದರೆ ಅಧಿಕಾರಿಗಳು ಇಳಿಜಾರು ಮಾಡಿರುವುದರಿಂದ ಪರಿಶಿಷ್ಟ ಜಾತಿಯ ನಿವಾಸಿಗಳ ಮನೆಗಳ ಬಳಿ ಕಲುಷಿತ ನೀರು ಸಾಗುವಂತೆ ಮಾಡಿದ್ದಾರೆ.
ಎಲೆತೋಟದ ಬಳಿ ರಾಜಕಾಲುವೆ ಗೆ ಕೊಳಕು ನೀರು ಹೋಗದಂತೆ ಅವೈಜ್ಞಾನಿಕ ವಾಗಿ ಚರಂಡಿ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಕಾಮಗಾರಿಯಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಲೋಪದೋಷಗಳನ್ನು ಸರಿಪಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.