ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೈತ ಕುಟುಂಬದ ಸದಾಶಿವಪ್ಪ ಗಂಗಮ್ಮ ( ಮಲ್ಲಮ್ಮ ) ರ ಪುತ್ರರಾದ ಯುವ ಕವಿ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ. ಎಸ್. ರವರು ಸಾಹಿತ್ಯ ಹಾಗೂ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಕೊಂಡಿದ್ಧು ಈಗಾಗಲೇ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿದ್ದಾರೆ,
ಸಾಹಿತ್ಯ ಮತ್ತು ನಾಡು ನುಡಿಯ ಸಂಸ್ಕೃತಿ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಪರಿಗಣಿಸಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
17/11/2024 ರ ಭಾನುವಾರ ದಂದು ಕಸ್ತೂರಿ ಸಿರಿಗನ್ನಡ ವೇದಿಕೆ ( ರಿ. ) ಬೆಳಗಾವಿ ವತಿಯಿಂದ ಗೌರವ ಪೂರ್ವಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರಾದ ಕವಿತ್ತ ಕರ್ಮಮಣಿಯವರು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
