ಚಾಚಾ, ಚಾಚಾ, ನೆಹರೂ ಚಾಚಾ, ಮಕ್ಕಳ ಚಾಚಾ, ಜಯಭಾರತಿಯ ಸುಪುತ್ರ ಮಕ್ಕಳಿಗೆ ನಿನ್ನಯ ಪ್ರೀತಿ ಅಮೃತ ।। ಸ।।
ಹುಟ್ಟಿದೆಯಾ ಸಿರಿವಂತಿಕೆಯಲ್ಲಿ ಬೆಳೆದೆಯಾ ಗುಣವಂತಿಕೆಯಲ್ಲಿ ದೇಶದ ಸಮೃದ್ಧಿಗೆ ಸಿರಿತನ ತ್ಯಾಗ ಮಾಡಿದೆಯಾ ದೇಶಸೇವೆಯ ಮುಕ್ತಿಯಲಿ ಸಿರಿತನವ ಮರೆತೆಯಾ ।।೧।।
ಪ್ರೀತಿಸಿದೆಯಾ ಹೊಳೆಹೊಳೆವ ಎಳೆಎಳೆಯ ಕಣ್ಣಳ ಹರಸಿದೆಯಾ ಭವಿಷ್ಯದ ಆರಾಧಕರು ಮಕ್ಕಳೆಂದು ಪ್ರೀತಿಸಿದೆಯಾ ಗ್ರಂಥಗಳ ಪ್ರೀತಿಸಿದೆಯಾ ಗುಲಾಬಿಗಳ ಜ್ಞಾನವಂತಿಕೆ ಮೆರೆಸಿದೆಯಾ ಹೃದಯವಂತಿಕೆ ತೋರಿಸಿದೆಯಾ ।।೨।।
ನಿನ್ನೀ ಗುಲಾಬಿ ಪ್ರೀತಿ ಮಕ್ಕಳ ಪ್ರೀತಿಯ ನೀತಿ ತೋರುವುದು ನಿನ್ನಯ ಕರುಣಾಮಯ ನೀತಿ ಸಿರಿತನಕ್ಕಿಂತಲೂ ಸಿಹಿ, ನಿನ್ನ ಹೃದಯ ಸುಮಧುರ ಪ್ರೀತಿ ಮಕ್ಕಳ “ಹೃದಯ-ಜಗವ” ಗೆದ್ದಿರುವುದು ನಿನ್ನಯ ಪ್ರೀತಿ ||೩||
ಹುಟ್ಟಿನ ಗುಟ್ಟು ಹೇಳಿದೆ ಸಾವಿನಲ್ಲೂ ಗೆಲುವು ಪಡೆದೆ “ನನ್ನೀ ದೇಹದ ಬೂದಿ ಹಾರಿ ಬಿಡಿ ಹಾರಿ ಬಿಡಿ ಭಾರತ ಮಾತೆಯ ಮಣ್ಣ ಕಣಕಣದಲ್ಲಿ ವಿಲೀನವಾಗಲೆಂದು,” ದೇಹ ಅಳಿದರೂ ಆತ್ಮ ಉಳಿಸಿ ಮೋಕ್ಷ ಪಡೆದೆ ಭಾರತಾಂಬೆಯಲಿ ||೪||
ರಚನೆ: ಜಂಬರಗಟ್ಟ ಟಿ.ಮಂಜಪ್ಪ ನಿ.ಮು.ಶಿ, 9448857719