ವಿಜಯನಗರ : ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್. ಎನ್.ಟಿ. ಅವರ ಅಧ್ಯಕ್ಷತೆಯಲ್ಲಿ ದಿನಾಂಕ; 15-11-2024 ರಂದು ಕೂಡ್ಲಿಗಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ(ಕೆ.ಡಿ.ಪಿ) ಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಶಾಸಕರು ಮಾತನಾಡಿ ಕೂಡ್ಲಿಗಿಗೆ ದೀರ್ಘ ಇತಿಹಾಸ ಇದೆ. ಹಿಂದುಳಿದ ತಾಲೂಕಿನ ಹಣೆ ಪಟ್ಟಿಗೆ ಗುರಿಯಾಗಿ ಅಭಿವೃದ್ಧಿ ಪರ ಕಾರ್ಯ ನಿರ್ವಹಿಸಲಾಗದ ಸ್ಥಿತಿ ಇದೆ ಎಂದರು.
ನಮ್ಮಲ್ಲಿ ಸ್ಥಳೀಯ ಉದ್ಯೋಗ ಮತ್ತು ವಸತಿ ಸಮಸ್ಯೆ ಇದೆ. ಹೆಸರು ಹೇಳದ ಪರಿಸ್ಥಿತಿಯಲ್ಲಿ ಮನೆ ಕೊಡಿ ಎನ್ನುವ ಸ್ಥಿತಿ ಇದೆ. ಆದರೂ ಅರ್ಥ ಮಾಡಿಕೊಳ್ಳುತ್ತಿಲ್ಲ.
ಆದರೆ, ನಾನು ಮತ್ತು ನೀವು ಸರ್ಕಾರದ ಸಂಬಳವನ್ನು ತೆಗೆದುಕೊಳ್ಳುತ್ತೇವೆ. ಅದಕ್ಕೆ ತಕ್ಕಂತೆ ಕೆಲಸ ಮಾಡೋಣ ನನ್ನ ತಾಳ್ಮೆಗೂ ಒಂದು ಮಿತಿ ಇದೆ. ನನ್ನ ತಾಳ್ಮೆಯನ್ನು ನೀವು ಪರಿಕ್ಷಿಸಬೇಡಿ ಮುಂದಿನ ದಿನಗಳಲ್ಲಿ ತಕ್ಕ ರೀತಿಯಲ್ಲಿ ಕ್ರಮಕೈಕೊಳ್ಳುತ್ತೇನೆ. ಅದಕ್ಕೆ ನೀವು ಬದ್ಧರಾಗಬೇಕು ಎಲ್ಲದಕ್ಕೂ ಸಿದ್ಧನಾಗಿ ಬಂದಿರುವೆ,ನಮ್ಮಲ್ಲಿ ಸ್ಮಶಾನಕ್ಕೂ ಒಳ್ಳೆಯ ದಾರಿ, ನೀರಿನ ವ್ಯವಸ್ಥೆ, ಕಾಂಪೌಂಡ್ ಒದಗಿಸಿ ಅಭಿವೃದ್ಧಿ ಪಡಿಸಬೇಕು,ಅಂಗನವಾಡಿ ಮತ್ತು ವಸತಿ ನಿಲಯಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶ ಆಹಾರವನ್ನು ಪೂರೈಸಬೇಕು.
ಸ್ಥಳೀಯ ಉದ್ಯೋಗ ಹಾಗೂ ಸೌಲಭ್ಯಗಳು ಹಂಚಿಕೆ ವೇಳೆ ಸಾಮಾಜಿಕ ನ್ಯಾಯ ರೀತಿಯನ್ನು ಪಾಲಿಸಬೇಕು
ಹಾಗೆಯೇ,ಶಿಕ್ಷಣ, ಆರೋಗ್ಯ, ಕೃಷಿ, ವಿದ್ಯುತ್, ರಸ್ತೆ, ಇನ್ನೂ ಮುಂತಾದ ಕೆಲಸ ಕಾರ್ಯಗಳನ್ನು ಕೈಗೆ ಎತ್ತಿಕೊಂಡು ಕಾರ್ಯ ನಿರ್ವಹಿಸುವ ಜೊತೆಗೆ ಸಾಮಾಜಿಕ ಸುಧಾರಣೆಗೆ ಒತ್ತು ಕೊಡಲು ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ. ರೇಣುಕಾ , ಕೊಟ್ಟೂರು. ತಹಶೀಲ್ದಾರಾದ ಅಂಬರೀಶ. ರವರು ಕೂಡ್ಲಿಗಿ ಮತ್ತು ಕೊಟ್ಟೂರು. ತಾ. ಪಂ. ಇ . ಓ . ಅಧಿಕಾರಿಗಳು. ಮತ್ತು ಇನ್ನಿತರ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ