ಹೇಳಿ ಕೊಟ್ಟು ದುಡಿಮೆಯ ಸೂತ್ರ
ಜಪಿಸಲು ಹೇಳುತ ಶ್ರಮದ ಮಂತ್ರ
ಜೀವನ ಸ್ಥಿತಿಯು ಆಗದಂತೆ ಅತಂತ್ರ
ಎಲ್ಲರಿಗೂ ಕೊಡುವೆ ಸ್ವಾಸ್ಥ್ಯ ಸ್ವಾತಂತ್ರ್ಯ
ನಾ ಭಾರತದ ಪ್ರಧಾನಿಯಾದರೆ.
ಸಾರುತ ಮರ ಬೆಳೆಸುವ ಸಂಸ್ಕಾರ
ರೂಪಿಸುತ ಉತ್ತಮದ ಪರಿಸರ
ತಿಳಿಸಿ ಕಲೆ ಸಂಸ್ಕೃತಿಯ ವಿಚಾರ
ಕೊಡುವೆ ಆರೋಗ್ಯಕ್ಕೆ ಸಹಕಾರ
ನಾ ಭಾರತದ ಪ್ರಧಾನಿಯಾದರೆ.
ತೆಗೆದುಹಾಕಿ ಮೀಸಲಾತಿ ಪದ್ಧತಿ
ಮಾಡುತ ಲಂಚಗುಳಿತನ ರದ್ಧತಿ
ತಂದು ಕಾನೂನಿನ ಹೊಸ ರೀತಿ
ತಿದ್ಧುವೆ ಸಮಾಜದಲ್ಲಿನ ಅನೀತಿ
ನಾ ಭಾರತದ ಪ್ರಧಾನಿಯಾದರೆ.
ಪಡೆದು ಸಚಿವ ಸಂಪುಟ ಸಹಮತ
ಕಾಯ್ದುಕೊಂಡು ಬಡ ಜನರ ಹಿತ
ಬೆಳೆದ ಉತ್ಪನ್ನಗಳಿಗೆ ತೆರಿಗೆ ರಹಿತ
ದುಂದು ವೆಚ್ಚಕ್ಕೆ ಕಡಿವಾಣ ಹಾಕುವೆ
ನಾ ಭಾರತದ ಪ್ರಧಾನಿಯಾದರೆ.
ನುಡಿದಂತೆ ನಡೆದು ಸಾಧಿಸಿ ತೋರುವೆ
ಕೊಟ್ಟ ಮಾತಿಗೆ ತಪ್ಪದೆ ನಡೆಯುವೆ
ದೇಶದ ಅಭಿವೃದ್ಧಿಗೆ ನಿತ್ಯ ಶ್ರಮಿಸುವೆ
ಸರ್ವರಿಗೂ ಸಮಬಾಳನು ಕೊಡುವೆ
ನಾ ಭಾರತದ ಪ್ರಧಾನಿಯಾದರೆ.
ದೇಶ ದ್ರೋಹಿಗಳಿಗೆ ಹಾಕುವೆ ಬರೆ
ಅತ್ಯಾಚಾರಿಗೆ ತಪ್ಪಿಸೆನು ನಿತ್ಯ ಸೆರೆ
ಕೊಡುತ ನೆಮ್ಮದಿಯ ಬಾಳಿಗೆ ಕರೆ
ದೇಶಕ್ಕಾಗಿ ಬಾಳುವೆ ಇದಂತೂ ಖರೆ
ನಾ ಭಾರತದ ಪ್ರಧಾನಿಯಾದರೆ…
✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
( ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.