ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕ ರೈಲ್ವೇ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಬೆಳಗಾವಿ ಜಿಲ್ಲೆಯ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿಯಲ್ಲಿರುವ ಅವರ ಸ್ವಗೃಹದಲ್ಲಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮಖಂಡರು ಭೇಟಿಯಾಗಿ ಸನ್ಮಾನಿಸಿದರು.
ಈ ವೇಳೆ ಲೋಕಾಪುರದಿಂದ ರಾಮದುರ್ಗ ಶಿರಸಂಗಿ ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡವರೆಗೆ ರೈಲ್ವೆ ಮಾರ್ಗ ನಿರ್ಮಿಸುವಂತೆ ಒತ್ತಾಯಿಸಿ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ಕಳೇದ 20 ವರ್ಷಗಳಿಂದ ಲೋಕಾಪೂರದಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಜನತೆ ಒತ್ತಾಯಿಸುತ್ತಾ ಬಂದಿದ್ದಾರೆ. ಕಳೆದ ನವೆಂಬರ 12 ರಂದು ರಾಮದುರ್ಗ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿಯೂ ನೀಡಲಾಗಿತ್ತು. ಈ ಹೋರಾಟದ ಭಾಗವಾಗಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೂ ಮನವಿಗಳನ್ನು ಅರ್ಪಿಸಲಾಗಿತ್ತು, ಮನವಿಗೆ ಸ್ಪಂದಿಸಿದ ಬೆಳಗಾವಿ ಮತಕ್ಷೇತ್ರದ ಸಂಸದರಾದ ಜಗದೀಶ ಶೆಟ್ಟರರವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಭೇಟಿಯಾಗಿ ಲೋಕಾಪೂರದಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ಬಹುದಿನಗಳ ಕನಸು ಇದ್ದು, ಈ ಹಿಂದೆ ಈ ರೈಲು ಮಾರ್ಗಕ್ಕೆ ಸರ್ವೇಯೂ ನಡೆದು ಕಾರಣಾಂತರದಿಂದ ತಡೆಯಾಗಿದೆ ಎಂದು ವಿವರಿಸಿ ಸದ್ಯ ಈ ಭಾಗದಲ್ಲಿ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸಿದ ಸಂಸದರಿಗೆ ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಭಿನಂದಿಸಿತು.
ಮನವಿ ಸ್ವೀಕರಿಸಿದ ನಂತರ ಮಾನ್ಯ ಜಗದೀಶ ಶೆಟ್ಟರ್‌ರವರು ಮಾತನಾಡಿ ಈಗಾಗಲೇ ನಾನು ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ಲೋಕಾಪೂರದಿಂದ ಧಾರವಾಡದವರೆಗೆ ಬರುವಂತಹ ಧಾರ್ಮಿಕ ಸ್ಥಳಗಳಾದ ಯಲ್ಲಮ್ಮ ದೇವಿ ದೇವಸ್ಥಾನ, ಸುರೇಬಾನದಲ್ಲಿರುವ ಪ್ರಸಿದ್ದ ಶಬರಿ ದೇವಸ್ಥಾನ, ಶಿರಸಂಗಿಯ ಕಾಳಮ್ಮ ದೇವಿಯ ದೇವಸ್ಥಾನಗಳು ಬರುತ್ತಿದ್ದು ಇಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮುಖ್ಯವಾಗಿ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಒಂದು ವರ್ಷದಲ್ಲಿ ಸುಮಾರು 1 ಕೋಟಿಯಷ್ಟು ಜನರು ದೇವಿಯ ದರ್ಶನಕ್ಕೆ ಬಂದು ಹೋಗುತ್ತಾರೆ.
ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ ಕಾಳಮ್ಮ ದೇವಿ, ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗ ಮಾಡಿದರೆ ಬಹಳಷ್ಟು ಜನರಿಗೆ ಈ ಯೋಜನೆಯಿಂದ ತುಂಬಾ ಅನುಕೂಲವಾಗುತ್ತದೆ ಹಾಗೂ ರೈಲ್ವೆ ಇಲಾಖೆಗೆ ಲಾಭವೂ ಆಗಲಿದೆ ಎಂದು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಮನದಟ್ಟು ಮಾಡಲಾಗಿದೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮುಂಬರುವ ಚಳಿಗಾಲ ಅಧಿವೇಶನದಲ್ಲಿ ನಾನು ಮತ್ತು ರಾಜ್ಯ ರೈಲ್ವೆ ಖಾತೆ ಸಚಿವರಾದ V ಸೋಮಣ್ಣರವನ್ನು ಜೊತೆಗೂಡಿಸಿಕೊಂಡು ಲೋಕಾಪೂರದಿಂದ ಧಾರವಾಡಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯ ಪಡಿಸುತ್ತೇವೆಂದು ಭರವಸೆ ನೀಡಿದರು, ಈ ಹಿಂದೆ ರೈಲ್ವೆ ಇಲಾಖೆಯಿಂದ 2016-17 ರಲ್ಲಿ ಆಗಿರುವ ಸರ್ವೇಯನ್ನು ಮತ್ತೊಮ್ಮೆ ಮಾಡಬೇಕೆಂದು ಒತ್ತಾಯಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರಾದ ಜಿ.ಎಮ್.ಜೈನೆಖಾನ್, ಮಲ್ಲಣ್ಣ ಯಾದವಾಡ, ಮಹಮ್ಮದಶಫಿ ಬೆಣ್ಣಿ, ಎಸ್.ಜಿ.ಚಿಕ್ಕನರಗುಂದ, ಎಮ್.ಕೆ.ಯಾದವಾಡ, ದಾದಾಪೀರ ಕೆರೂರ, ದಾದಾಪೀರ ಹಾಜಿ, ಎ.ಆರ್.ಪಠಾಣ ಇನ್ನಿತರರು ಉಪಸ್ಥಿತರಿದ್ದರು.
