ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಸ್ನಾತಕೋತರ ಕೇಂದ್ರ ಚಾಲನೆ ನೀಡಿದ್ದು ಇಲ್ಲಿಯವರೆಗೂ ದಾಖಲಾತಿಯನ್ನು ಪ್ರಾರಂಭಿಸಿಲ್ಲ ಹಾಗೂ ಸಿಬ್ಬಂದಿ ನಿಯೋಜನೆ ಮಾಡಿರುವುದಿಲ್ಲ ಇದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಇನ್ನೂ ಇಲ್ಲಿವರೆಗೂ ನೀಡಿರುವುದಿಲ್ಲ ಇದರ ಸಂಬಂಧಿಸಿದ ಈ ಕೂಡಲೇ ತಾಂತ್ರಿಕ ದೋಷ ಇರುವುದನ್ನು ಸರಿಪಡಿಸಿ ದಾಖಲಾತಿಯನ್ನು ಆರಂಭಿಸಬೇಕು ಎಂದು ಪ್ರತಿಭಟನೆ ಮಾಡಿ ಉಪ ವಿಭಾಗಾಧಿಕಾರಿಗಳು ಹರಪನಹಳ್ಳಿ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು.
ತಹಸಿಲ್ದಾರ್ ಗ್ರೇಟ್ ನಟರಾಜ್ ಅವರು ಮನವಿ ಸ್ವೀಕರಿಸಿ ಕುಲಸಚಿವರಿಗೆ ಮನವಿ ಪತ್ರ ಕಳುಹಿಸಲಾಯಿತು ಈ ಸಂದರ್ಭದಲ್ಲಿ ಐಸಾ ರಾಜ್ಯ ಸಂಚಾಲಕ ಸಮಿತಿ ಸದಸ್ಯರಾದ ಗುಳೆಗಟ್ಟಿ ಸಂತೋಷ್, ವಿದ್ಯಾರ್ಥಿ ಮುಖಂಡ ಆಕಾಶ್, ಕಾರ್ತಿಕ್, ಸಂದೇರ್ ಪರಶುರಾಮ್ ಬಾಲಗಂಗಾಧರ್ ಇಬ್ರಾಹಿಂ ಸಾಬ್ ಉದಯಕುಮಾರ್ ಇನ್ನೂ ಹಲವು ವಿದ್ಯಾರ್ಥಿ ಮುಖಂಡರುಗಳು ಭಾಗವಹಿಸಿದ್ದರು.
