ಹನೂರು :ಕ್ಷೇತ್ರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೆನೆ ಇನ್ನು ಮುಂದೆಯು ಮಾಡುತ್ತೆನೆ ಎಂದು ನೀಶಾಂತ್ ಶಿವಮೂರ್ತಿ ತಿಳಿಸಿದರು .
ಪಟ್ಟಣದ ಹೊರವಲಯದಲ್ಲಿರುವ ಮಹಾಮನೆಯಲ್ಲಿ ಕ್ಷೇತ್ರದ ಮುಖಂಡರುಗಳನ್ನು ಬೇಟಿ ಮಾಡಿದ ನಂತರ ಮಾತನಾಡಿದ ಅವರು ಹನೂರು ಹೊಸ ತಾಲೂಕು ರಚನೆಯಾಗಿ ಯಾವುದೇ ಅಭಿವೃದ್ಧಿಯಾಗಿಲ್ಲ ಹೆಚ್ಚು ಕಾಡನ್ನು ಹೊಂದಿರುವ ತಾಲೂಕಾಗಿದ್ದು ಹಲವಾರು ಜನರು ಹುದ್ದೆಗಾಗಿ ಸ್ಥಳಾಂತರ ಮಾಡುತ್ತಿದ್ದಾರೆ ಕೆಲಸಕ್ಕಾಗಿ ಗುಳೆ ಹೊರಡುತ್ತಿದ್ದಾರೆ ಮುಂದುವರೆದಿರುವ ಜಿಲ್ಲೆಗಳತ್ತ ಮುಖ ಮಾಡುತ್ತಿದ್ದಾರೆ ಆದ್ದರಿಂದ ಈ ನಮ್ಮ ತಾಲೂಕಿನಲ್ಲಿಯೇ ಜನರಿಗೆ ಬೇಕಾದಂತ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ಮತ್ತು ರೈತರಿಗೆ ಅನುಕೂಲವಾಗುವ ರೀತಿ ಚರ್ಚೆಯನ್ನು ಮಾಡಲಾಗಿದೆ ಎಂದರು ಇದೇ ಸಮಯದಲ್ಲಿ ಕಣ್ಣೂರು ,ಮಂಗಲ ,ಗ್ರಾಮದ ಮುಖಂಡರುಗಳು ಹಾಜರಿದ್ದರು. ವರದಿ ಉಸ್ಮಾನ್ ಖಾನ್.
