ಮುಂಡಗೋಡ ಪಟ್ಟಣ ಉತ್ತರಕನ್ನಡ ಜಿಲ್ಲೆಯ 11 ತಾಲೂಕಿನಲ್ಲಿ ಒಂದು,ಬೌಗೊಳಿಕವಾಗಿ ವಿಶಾಲವಾಗಿದ್ದು, ಕ್ರೀಡೆ , ಅದಕ್ಕೆ ಸಂಬಂದ ಪಟ್ಟ ಚಟುವಟಿಕೆಗಳ ಅಭಿವೃದ್ಧಿಯಲ್ಲಿ ಕುಂಟ ಕುದುರೆಯಂತೆ ಸಾಗುತ್ತಿರುವುದು ಮಾತ್ರ ವಿಪರ್ಯಾಸ.ಹೌದು ಮುಂಡಗೋಡ ತಾಲೂಕಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲ, ಕ್ರಿಕೆಟ್, ಅಥ್ಲೆಟಿಕ್, ಖೋ ಖೋ ,ವಾಲಿಬಾಲ್, ಪುಟ್ಬಾಲ್ ಸೇರಿದಂತೆ ಎಲ್ಲ ಬಗೆಯ ಕ್ರೀಡಾಪಟುಗಳು ಇಲ್ಲಿ ಸಿದ್ದವಾಗುತ್ತಿದ್ದಾರೆ ಆದರೆ ಅವರ ದೈಹಿಕ ಕ್ಷಮತೆಯನ್ನು ಕಾಪಾಡಲು ನೆರವಾಗುವಂತಹ ಒಂದು ಸುಸುಜ್ಜಿತ ಈಜುಕೊಳದ ಅವಶ್ಯಕತೆ ಮುಂಡಗೋಡ ದಲ್ಲಿ ತುಂಬಾ ಇದೆ. ಈಜುವುದರಿಂದ ಒಬ್ಬ ವ್ಯಕ್ತಿ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ
ಬಲಾಢ್ಯನಾಗಬಲ್ಲ ಹಾಗೂ ಈಜಿನಲ್ಲಿ ಮುಂದೆ ಭವಿಷ್ಯ ರೂಪಿಸಿಕೊಳ್ಳಬೇಕು ಎನ್ನುವಂತ ತಾಲುಕಿನ ಅದೆಷ್ಟೋ ಕ್ರೀಡಾ ಪಟುಗಳಿಗೆ ಇದು ವರದಾನವಾಗಲಿದೆ ಎರಡು ಬಾರಿ ಶಾಸಕರಾಗಿ ಮತ್ತು ಈ ಬಾರಿ ಸಚಿವರಾಗಿ ಅಭಿವೃದ್ಧಿ ಪಥಕ್ಕೆ ಹೊಸ ಆಯಾಮವನ್ನು ಬರೆದಿರುವ ಸಚಿವರು ಮಾನ್ಯ ಶಿವರಾಮ ಹೆಬ್ಬಾರ್ ಅವರು ಮನಸ್ಸು ಮಾಡಿದ್ದಲ್ಲಿ ವ್ಯವಸ್ಥಿತ ಈಜು ಕೊಳದ ಕನಸು ಬಹು ಬೇಗ ಈಡೇರಬುಹುದು.
ಮುಂಡಗೋಡ ನಗರದಲ್ಲಿ ಅನೇಕ ಕಡೆ ಸರ್ಕಾರಿ ಜಾಗವಿದ್ದು ಎಲ್ಲಾದ್ರೂ ಒಂದು ಕಡೆ ಈಜು ಕೊಳ ನಿರ್ಮಾಣಕ್ಕೆ ಪ್ರಯತ್ನ ನಡೆಸಬಹುದಾಗಿದೆ.
ಶಿರಸಿಯಲ್ಲಿ ನಗರಸಭೆ ವತಿಯಿಂದ ಈಜುಕೊಳವನ್ನು ನಿರ್ವಹಣೆ ಮಾಡಲಾಗುತ್ತಿದ್ದು,ಅಲ್ಲಿ ಸುವ್ಯವಸ್ಥಿತವಾಗಿ ನಿರ್ಮಿಸಿ, ನಿರ್ವಹಣೆ ಕೂಡ ಮಾಡಲಾಗುತ್ತಿದೆ.
ಮುಂಡಗೋಡ ದಲ್ಲಿ ಪಟ್ಟಣ ಪಂಚಾಯ್ತಿ ಅಸ್ತಿತ್ವ ದಲ್ಲಿ ಇರುವುದರಿಂದ ಈ ಬಗ್ಗೆ ಪಟ್ಟಣ ಪಂಚಾಯ್ತಿ ಮುಂಡಗೋಡನ ಅಧಿಕಾರಿಗಳು ಮತ್ತು ಸದಸ್ಯರು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ, ಮನಸ್ಸು ಮಾಡಿದರೆ ಈಜು ಕೊಳದ ಆಸೆ ಈಡೇರಬಹುದು.
ಒಟ್ಟಿನಲ್ಲಿ ಮುಂಡಗೋಡಕ್ಕೆ ಒಂದು ಸುಸಜ್ಜಿತ ಈಜು ಕೊಳ ನಿರ್ಮಿಸಿ ಎಂಬುದು ಇಲ್ಲಿನ ನಾಗರಿಕರ ಸಮಗ್ರ ಬೇಡಿಕೆಯಾಗಿದೆ