ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲೋನಿಯ ಗಂಗನಗೌಡ ಕಾಂಪ್ಲೆಕ್ಸ್ ನಲ್ಲಿರುವ ವನಸಿರಿ ಫೌಂಡೇಷನ್ ಕಾರ್ಯಾಲಯದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ಸಮ್ಮುಖದಲ್ಲಿ ದೇವದುರ್ಗ ಪರಿಸರ ಸೇವೆಯಲ್ಲಿನ ಅವಿರತ ಸೇವೆ ಪರಿಗಣಿಸಿ ದೇವದುರ್ಗ ತಾಲೂಕ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ಪಾಟೀಲ್ ಅವರನ್ನು ನೇಮಕ ಮಾಡಿ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಅಮರೇಗೌಡ ಮಲ್ಲಾಪುರ ಸಂಸ್ಥಾಪಕ ಅಧ್ಯಕ್ಷರು, ಆದನಗೌಡ ಎಲೆಕೂಡ್ಲಿಗಿ ವನಸಿರಿ ಗೌರವ ಅಧ್ಯಕ್ಷರು, ಸುರೇಶರೆಡ್ಡಿ ವಿರುಪಾಪುರ್, ದುರ್ಗೇಶ (dsp) ವನಸಿರಿ ಜಿಲ್ಲಾ ಉಪಾಧ್ಯಕ್ಷರು,ಸದ್ದಾಂ ಬಡಿಬಸ್,ಸಂಗನಗೌಡ ದೇವರಗುಡಿ,ವನಸಿರಿ ದತ್ತು ಪುತ್ರ ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಇದ್ದರು.
