ಉತ್ತರ ಕನ್ನಡ/ ಶಿರಸಿ : ಶ್ರೀ ಮಠದ ಅಂಗ ಸಂಸ್ಥೆಯಾದ ಶ್ರೀ ರಾಜ ರಾಜೇಶ್ವರೀ ವಿದ್ಯಾಸಂಸ್ಥೆಯ ಅಡಿಯಲ್ಲಿ ಶ್ರೀನಿಕೇತನ ಶಾಲೆಯ ವಾರ್ಷಿಕ ಕಾರ್ಯಕ್ರಮವು ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.
ಪರಮ ಪೂಜ್ಯ ಶ್ರೀ ವಿಜಯಾನಂದ ಸರಸ್ವತಿ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಪ್ರೊ. ಕೆ. ಪಿ. ಪುತ್ತೂರಾಯ್ ಅವರು ಮಕ್ಕಳಿಗೆ ಹಾಗೂ ಪಾಲಕರಿಗೆ ಮನೋಜ್ಞವಾಗಿ ಅನೇಕ ವಿಷಯಗಳ ಉಪನ್ಯಾಸವನ್ನು ನೀಡಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
