ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಉಪವಿಭಾಗ ಕಛೇರಿ ಆವರಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್(ಡಿ), ಚಾವಿಸನಿನಿ. ಕೊಳ್ಳೇಗಾಲ ಉಪ ವಿಭಾಗ, ರವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಆಯೋಜನೆ ಮಾಡಲಾಗಿತ್ತು.
ಜನಸಂಪರ್ಕ ಸಭೆಯನ್ನು ಸಮಯ ಮಧ್ಯಾಹ್ನ 3:00 ಗಂಟೆಗೆ ಆಯೋಜನೆ ಮಾಡಲಾಗಿತ್ತು ಇದರಲ್ಲಿ ಜನ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದರು ಹಾಗೂ ಬ್ಯಾನರ್ ಕೂಡ ಹಾಕಿರಲಿಲ್ಲ ಹಾಗೆಯೇ ಸಹಾಯಕ ಅಭಿಯಂತರಾದ ರಾಜು ಸರಿಯಾದ ರೀತಿಯಲ್ಲಿ ಜನರಿಗೆ ಸಹಕರಿಸಲಿಲ್ಲ ಕೋಪದ ಭರದಲ್ಲಿ ಮಾತಾಡಿದರು ಹಾಗೆಯೇ ಈ ಚವಿಸನಿನಿ ಕೊಳ್ಳೇಗಾಲ ಉಪ-ವಿಭಾಗ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳನ್ನು ಸಭೆಗೆ ಹಾಜರಾಗಿ ಬಗೆಹರಿಸಿಕೊಳ್ಳಬೇಕೆಂದು ಈ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ತಿಳಿಸಿದರು ಆದರೆ ಸಹಾಯಕ ಅಭಿಯಂತರ ಚಾವಿಸನಿನಿ. ಕೊಳ್ಳೇಗಾಲ ಉಪ ವಿಭಾಗ ರಾಜು ಇವರು ಜನರ ಜೊತೆ ಕ್ರೂರ ಸ್ವಭಾವದಿಂದ ವರ್ತಿಸುತ್ತಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಇದೆ ವೇಳೆ ಕಾರ್ಯಪಾಲಕ ಅಭಿಯಂತರ ಆದ ತಬಸ್ಸುಂ ಅಪ್ಸ ಬಾನು ಇವ್ರು ಸಹ ನೆರೆದಿದ್ದ ಜನರ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಆಲಿಸದೆ ನಿಖರ ಮಾಹಿತಿ ಕೊಡದೆ ಇದ್ದಾಗ ಸಭೆಯು ಅಲ್ಪ ಸಮಯ ಗೊಂದಲದ ಗೂಡಾಗಿತ್ತು ನಂತರ ಆತುರ ಆತುರದಲ್ಲಿ ಸಹಾಯಕ ಅಭಿಯಂತರ ರಾಜು ಸಭೆಯನ್ನು ಮುಗಿಸಿದರು, ಇದರಿಂದ ಸಾರ್ವಜನಿಕರಿಗೆ ಬೇಸರ ಆಯ್ತು ಮುಂದಿನ ದಿನದಲ್ಲಿಯಾದರೂ ಅಚ್ಚುಕಟ್ಟಾಗಿ ಇಂಥ ಸಭೆಗಳನ್ನು ಮಾಡಬೇಕೆಂದು ಜನರು ಮಾತಾಡಿಕೊಂಡರು.
ಈ ಸಭೆಯಿಂದ ಜನರ ಸಮಯ ವ್ಯರ್ಥ ಆಯ್ತು ಇದರಿಂದ ಜನರಿಗೆ ಯಾವುದೇ ಉಪಯೋಗ ಆಗಿಲ್ಲ
ಎಂದು ಸಭೆಯಲ್ಲಿ ಸೇರಿದ್ದ ನಾಗರಿಕರು ಅಭಿಪ್ರಾಯಪಟ್ಟರು.
ವರದಿ ಉಸ್ಮಾನ್ ಖಾನ್
