ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀಮಂತ ಯಾರು?

ಬಡತನ ಯಾರಿಗೂ ಬೇಡ, ಎಲ್ಲರಿಗೂ ಈ ಶ್ರೀಮಂತಿಕೆ ಬೇಕು.
ಬಡತನ ಯಾಕೆ ಬೇಡ?
ಬಡತನ ಅಹಿತಕರವಾಗಿದೆ!
ಮಾನವ ಸಮಾಜದಲ್ಲಿ ಮಾನವನಿಗೆ ಬೆಲೆ ಇಲ್ಲದಂತಾಗಿಸುತ್ತದೆ!
ಘೋರವಾದ ನರಕ ದರ್ಶನ ಮಾಡಿಸುತ್ತದೆ!
ಅದಕ್ಕೆ ಈ ಬಡತನ ಯಾರಿಗೂ ಬೇಡ…
ಬೇಡವೇ ಬೇಡ!

ಶ್ರೀಮಂತ-ಬಡವ…!
ಬಡವ ಯಾರು?
ಶ್ರೀಮಂತ ಯಾರು?
ಈ ಬಡತನ-ಸಿರಿತನಕ್ಕೆ ಕಾರಣ ಯಾರು ?
ಏನು?

೧.ಆಹಾರ, ಬಟ್ಟೆ, ವಸತಿ… ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಆಗದವನೇ ಬಡವ.

೨.ಹಣ, ಆಸ್ತಿ, ಅಂತಸ್ತು, ಐಷಾರಾಮಿ ಜೀವನದಲ್ಲಿರುವವನೇ ಶ್ರೀಮಂತ.

೩.ಬಡತನ ಸಿರಿತನಕ್ಕೆ ಹಲವು ಕಾರಣಗಳುಂಟು.
ಆ ಕಾರಣಗಳಿಗೆಲ್ಲಾ
ಈ ಮಹಾ ಮಾನವನೇ ಮೂಲ
ಕಾರಣನಾಗಿದ್ದಾನೆ.

ಬಡವರೆಲ್ಲರೂ ಬಡವರಲ್ಲ!
ಶ್ರೀಮಂತರೆಲ್ಲರೂ ನಿಜವಾದ ಶ್ರೀಮಂತರಲ್ಲ!’ ಹಾಗಾದರೆ (ನಿಜವಾದ) ಶ್ರೀಮಂತ ಯಾರು?

ನಿಮ್ಮ ವ್ಯಕ್ತಿತ್ವಕ್ಕೊಂದು ಚಿಕ್ಕ ಸವಾಲು!

೧.ನನ್ನ ಹತ್ತಿರ ಏಳು ಜನುಮ ಕುಳಿತು ತಿಂದರೂ ಮುಗಿಯದ ಸಿರಿ – ಸಂಪತ್ತಿದೆ.
ಆದರೆ ಈವಾಗ ನನ್ನಲ್ಲಿರುವ ಈ ಸಿರಿಸಂಪತ್ತಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ.
ಯಾಕೆ ಅಂತ ನನಗೆ ಗೊತ್ತಿಲ್ಲವಾಗಿದೆ.
ಇದಕ್ಕೆ ಕಾರಣ ಏನು ಅಂತ ನಿಮಗೆ ಯಾರಿಗಾದರೂ ಗೊತ್ತುಂಟಾ…?

೨.ಸಿರಿವಂತೆಯೆಂಬ ಹೂವನ್ನು ಇಷ್ಟಪಡುತ್ತಾರೆ ಈ ಜನ. ಆದರೆ ಬಡವನೆಂಬ ಮುಳ್ಳನ್ನು ಯಾಕೆ ಇಷ್ಟಪಡುವುದಿಲ್ಲ? ಏನ್ ಕಾರಣವಿದೆ ಬಡವನದು? ಬಡವನೆಂಬ ಮುಳ್ಳಿಗೂ ಮನಸ್ಸು-ಹೃದಯವೆಂಬುದೊಂದಿದೆ.
ಇದೇ ತಿಳಿದುಕೊಳ್ಳಬೇಕಾಗಿದೆ ನನಗೆ ಸಿರಿವಂತೆ ಎಂಬ ಹೂವಿಗೆ ಯಾವುದರ ಆಸರೆ ಬೇಕಾಗಿದೆ,
ತನ್ನ ಸಿರಿತನವೆಂಬ ಹೂವಿನದಾ,
ಇಲ್ಲ ಬಡತನವೆಂಬ
ಮುಳ್ಳಿನದಾ…?

೩.ನಿನಗೆ ಕೊಡುವುದಕ್ಕೆ ಏನೂ ಸಹ ಉಳಿದಿಲ್ಲ.
ಏನೂ ಉಳಿದಿಲ್ಲ ನಿನಗೆ ಕೊಡುವುದಕ್ಕೆ!
ಸಿರಿ ಸಂಪತ್ತು ಇಲ್ಲವಾಗಿದೆ. ಮುಗಿದುಹೋಗಿದೆ ಸಿರಿ ಸಂಪತ್ತು.
ಹೃದಯ ಹೇಳುತ್ತಿದೆ ಆಶೀರ್ವದಿಸು… ಆಶೀರ್ವಾದ ವಿಲ್ಲದೆ ನನ್ನಲ್ಲಿ ಬೇರೇನೂ ಉಳಿದಿಲ್ಲ.
ಆಶೀರ್ವಾದ ದೊಡ್ಡದಾ, ಇಲ್ಲ ಸಿರಿಸಂಪತ್ತು ದೊಡ್ಡದಾ…?

೪.ಬಡವರು ತನ್ನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದುಕ್ಕಾಗಿ ಶ್ರೀಮಂತರ ಬಳಿ ದುಡಿಯುತ್ತಾರೆ.
ಅದೇ ಶ್ರೀಮಂತರು ಮನೆಯಲ್ಲಿಯೇ ಕುಳಿತು ತನ್ನಲ್ಲಿರುವ ದುಡ್ಡಿನಿಂದ ತನಗೆ ಬೇಕಾದ್ದನ್ನು ಖರೀದಿಸಿ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಆದರೆ… ದುಷ್ಟ ಶ್ರೀಮಂತರ ದುಡ್ಡಿಗೆ ಸಿಗದ ಅಮೂಲ್ಯವಾದದ್ದೊಂದಿದೆ. ಶ್ರೀಮಂತರ ಮನೆಯಲ್ಲಿಯೂ ಇರದುದು; (ಅದು ನಿಮ್ಮ ಮನೆಯಲ್ಲಿ ಇದ್ದರೆ ನೀವು ಬಡವರಾಗಿದ್ದರೂ ಸಹ ನೀವೇ ನಿಜವಾದ ಶ್ರೀಮಂತರು.) ಅದು ಯಾವುದು …?
ಪ್ರಿಯ ಓದುಗರೇ, ತಾವು ಈ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವರಾಗಿದ್ದರೆ ನಿಜವಾಗಲೂ ನೀವು ತಕ್ಕಮಟ್ಟಿಗೆ ಬುದ್ದಿವಂತರು. ನಿಮ್ಮ ಬುದ್ಧಿ-ವ್ಯಕ್ತಿತ್ವ ಆಕರ್ಷಕವಾಗಿದೆ ಎಂದು ನಾನು ಅಂದುಕೊಳ್ಳುತ್ತೇನೆ. ದಯವಿಟ್ಟು ತಮ್ಮ ಉತ್ತರ ನನ್ನ ವಿಳಾಸಕ್ಕೆ ಬರೆದು ತಿಳಿಸಿ. ಉತ್ತರ ಗೊತ್ತಾಗದವರು ನನ್ನ ಮೊಬೈಲ್ ನಂಬರ್ ಗೆ ಡಯಲ್ ಮಾಡಿ… ಮಾಡ್ತೀರಾ? ಶೋ… ಅದು ಈಗ ಇರಲಿ ಬಿಡಿ. ವಾಪಸ್ ವಿಷಯಕ್ಕೆ ಬರೋಣ.

ಸ್ವಾಭಿಮಾನದ ಕೂಗು ಇದು! ಮರ್ಯಾದೆ ಯಾರಿಗೆ ಸೇರಬೇಕು ? ನಿಜವಾದ ಶ್ರೀಮಂತ ಯಾರು ?

‘ನೀವು ಅಂತ ನಿಮಗೆ ಮಾತನಾಡುತ್ತಿದ್ದೇನೆ ನಾನು. ಆದರೆ ನೀವು… ‘ನೀನು’ ಅಂತ ಏಕವಚನದಲ್ಲಿ ಮಾತಾಡುತ್ತಿದ್ದೀರಾ ನೀವೂ ಸಹ ನನ್ನನ್ನು ನೀವು ಅಂತ ಮರ್ಯಾದೆಯಿಂದ ಯಾಕೆ ಮಾತಾಡುತ್ತಿಲ್ಲ? ಏನು ಕಡಿಮೆ ಇದೆ ನನ್ನಲ್ಲಿ ? ಹೇಳಿ… ಮಾತಾಡಿ! ಈ ನನ್ನ ಪ್ರಶ್ನೆಗಳಿಗೆ ಉತ್ತರಿಸಿ… ಉತ್ತರಿಸುತ್ತೀರಾ? ನೀವೆಲ್ಲಿಂದ ಉತ್ತರಿಸುತ್ತೀರ ಮಣ್ಣಲ್ಲಿ! ನಾನೇ ಹೇಳುತ್ತೇನೆ ಕೇಳಿ… ನೀವು ನನ್ನನ್ನು, ನೀವು – ತಾವು ಅಂತ ಮರ್ಯಾದೆಯಿಂದ ಯಾಕೆ ಮಾತನಾಡಿಸುವುದಿಲ್ಲ ಅಂದರೆ, ನಾನು ಬಡವ. ಈ ಕೊಳಕು ಸಮಾಜದ ದೃಷ್ಟಿಯಲ್ಲಿ ನಾನು ಬಡವ. ಬಡವ ಅಂತ ನನ್ನ ಹೆಸರು ಇದೆ. ಹಣ ಆಸ್ತಿ ಅಂತಸ್ತು ಐಷಾರಾಮಿ ಜೀವನ ನನ್ನದಲ್ಲ! ಅದಕ್ಕೆ ನಾನು ಬಡವ…! ನಾನು ಬಡವ ಆದರೇನಂತೆ ಹಣ ಆಸ್ತಿ ಅಂತಸ್ತು ಐಷಾರಾಮಿ ನನ್ನಲ್ಲಿ ಇಲ್ಲವಾದರೆ ಏನತ್ತೆ! ಇವೆಲ್ಲದರಗಿಂತಲೂ ಮಿಗಿಲಾದದ್ದು ನನ್ನಲ್ಲಿದೆ… ಅದೇ ವಿಶಾಲವಾದ ಪರಿಶುದ್ಧ ಮನಸ್ಸು ನನ್ನಲ್ಲಿದೆ! ನೋಡಿದ್ದನ್ನೇ ನಾನು ನುಡಿಯುತ್ತೇನೆ; ನುಡಿದಂತೆ ನಡೆಯುತ್ತೇನೆ. ನೋಟ – ನುಡಿ ಮತ್ತು ಮನಸ್ಸು… ಈ ಮೂರು ವಸ್ತುಗಳನ್ನು ಯಾರು ಸ್ಪಂದಿಸುತ್ತಾರೋ ಅವರೇ ನಿಜವಾದ ಶ್ರೀಮಂತ ಮನುಷ್ಯರು, ಮಹಾ ಮಾನವರು. ಈ ಮೂರು ವಸ್ತುಗಳ ಹಮ್ದರ್ದ್ ನನ್ನಲ್ಲಿದೆ.
ಆದರೆ ನಿಮ್ಮಲ್ಲಿ…ಇದೆಯಾ? ಇಲ್ಲ…ಖಂಡಿತಾ ಇಲ್ಲ! ಇಲ್ಲ ಅಂದಮೇಲೆ ನೀವು ಮನುಷ್ಯರ? ಮನುಷ್ಯರಲ್ಲ… ಮನುಷ್ಯ ರೂಪದ ಮೃಗ ನೀವು ! ಹೃದಯ ಇರಬೇಕಾದ ಜಾಗದಲ್ಲಿ ಕಲ್ಲು ಇದೆ. ಮಾನವೀಯತೆ ಇರಬೇಕಾದಲ್ಲಿ ಮೃಗತನ ಇದೆ. ನಿಮ್ಮ ನೋಟ ಕೆಟ್ಟದಾಗಿದೆ. ನುಡಿ ಸುಳ್ಳಾಗಿದೆ. ವಿಚಾರ ಮೋಸ- ವಂಚನೆಯಿಂದ ಕೂಡಿದೆ. ಒಟ್ಟಿನಲ್ಲಿ ನಿಮ್ಮ ಬ್ಯಾಗ್ರೌಂಡ್ ಬಗ್ಗೆ ಹೇಳಲು ಪರಮ ಅಸಹ್ಯ ತರಿಸುವಂತಿದೆ…! ಅಂದಮೇಲೆ ನಿಮ್ಮನ್ನು ನಾನೀಗ ನೀವು ಅಂತ ಮರ್ಯಾದೆ ನೀಡುವುದರಲ್ಲಿ ಏನು ಅರ್ಥ ಇದೆ..!? ನೀವೀಗ… ನೀನು, ಕೇವಲ ನೀನು ಮಾತ್ರ! ನಾನು… ನಾನೇ! ಅಬ್ಬ…ನನಗೂ ಮತ್ತು ನಿನಗೂ ಅದೆಷ್ಟೊಂದು ವ್ಯತ್ಯಾಸ! ಈಗ ಹೇಳು ಮರ್ಯಾದೆ ಯಾರಿಗೆ ಸೇರಬೇಕು? ನಿನಗೆ ಸೇರಬೇಕಾ ಇಲ್ಲ ನನಗೆ…? ಯಾರಿಗಿಸಿರಬೇಕು ಅಂತ ಬೇಗ ಬೊಗಳೊಲೆ… ಬೊಗಳುತ್ತೀಯಾ!?

  • ಜಿ ಎಲ್ ನಾಗೇಶ್
    ಧನ್ನೂರ(ಆರ್) – ೫೮೫೩೩೦
    ಬಸವಕಲ್ಯಾಣ ತಾಲೂಕು
    ಬೀದರ್ ಜಿಲ್ಲೆ.
    ಮೊಬೈಲ್ ನಂ. 9945686234
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ