ಬಂಧುಗಳೇ,
ಕರ್ನಾಟಕ ರತ್ನ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ರವರ ಬಗ್ಗೆ ಒಂದು ಲಕ್ಷ ಜನರ ಮನಸ್ಸಿನ ಭಾವನೆಗಳನ್ನು ಹಾಗೂ ಅವರ ಮನದ ಮಾತುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತರುವ ಆಲೋಚನೆಯೊಂದಿಗೆ ಮೊದಲನೆಯ ಭಾಗವಾಗಿ 17 ಮಾರ್ಚ 2025 ರಂದು ಪುನೀತ್ ರಾಜಕುಮಾರ್ ರವರ ಜನ್ಮದಿನದಂದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ನಡೆಯುವ ಸ್ಪೂರ್ತಿ ದಿನಾಚರಣೆ ಕಾರ್ಯಕ್ರಮದಲ್ಲಿ ನಾ ಕಂಡ ನನ್ನ ಪುನೀತ್ ರಾಜಕುಮಾರ್ ಭಾಗ- 1 ಪುಸ್ತಕವನ್ನು 1000 ಲೇಖಕರ ಮನದ ಮಾತುಗಳನ್ನು ಅಕ್ಷರ ರೂಪದಲ್ಲಿ ಪ್ರಕಟಿಸಿ ಬಿಡುಗಡೆ ಮಾಡಲು ಯೋಚಿಸಿದ್ದೇವೆ.
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಬಗ್ಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಾಗೂ ನಿಮ್ಮ ಮನದ ಮಾತುಗಳನ್ನು A4 ಅಳತೆಯ ಮುದ್ರಿತ ಒಂದು ಪುಟಕ್ಕೆ ಮೀರದಂತೆ ಕಳುಹಿಸಿ. ವಾಟ್ಸಪ್ ಅಥವಾ ಇಮೇಲ್ ಮೂಲಕ ಕಳುಹಿಸಿದರೆ ಅನುಕೂಲ.
ನಿಮ್ಮ ಭಾವಚಿತ್ರದ ಜೊತೆ ನಿಮ್ಮ ಸ್ವ ವಿವರ ಕಳುಹಿಸಿ. ಆಯ್ದ ಬರಹಗಳನ್ನು ಪ್ರಕಟಿಸಲಾಗುವುದು.
ಲೇಖನ ಕಳುಹಿಸಲು ಕೊನೆಯ ದಿನ 15 ಜನವರಿ 2025.
ವಂದನೆಗಳೊಂದಿಗೆ
ಡಾ. ನಾಗರಾಜ ನಾಯ್ಕ,
ಮುಖ್ಯಸ್ಥರು
ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ
ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ,
ಉಕ – 581355
Email id : anathashramanagarajnaik@gmail.com
ಮೊ. 9481389187 , 8073197439
