ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯನ್ನು ಅವನ ನಟನೆ ಅವನ ವ್ಯಕ್ತಿತ್ವ ಅವನ ಸೌಂದರ್ಯ ಅವನ ಅಭಿರುಚಿಗಳ ಮೂಲಕ ಗುರುತಿಸುತ್ತೇವೆ. ಭಾರತದಲ್ಲಿ ಯಾವುದೇ ನಟನನ್ನು ತೆಗೆದುಕೊಂಡರೂ ಕೂಡಾ ಅವನ ಜೀವನ ಕ್ರಮದಲ್ಲಿ ಹೊಂದಿಲ್ಲ ಒಂದು ತೊಂದರೆ ಇರುತ್ತದೆ. ಆದರೆ ಪುನೀತ್ ರಾಜಕುಮಾರ್ ಜೀವನದಲ್ಲಿ ಹಾಗಲ್ಲ, ಇಡೀ ದೇಶವೇ ನಟನೆಯಲ್ಲಿ ಆರಾಧನೆ ಮಾಡುವ ಡಾಕ್ಟರ್ ರಾಜಕುಮಾರ್ ಅಂತ ಕುಟುಂಬದಲ್ಲಿ ಜನಿಸಿದ ಪುನೀತ್, ಜೀವನಪೂರ್ತಿ ಸರಳತೆಯಿಂದ ಕುಟುಂಬದ ಆ ಜವಾಬ್ದಾರಿಯ ನಿರ್ವಹಿಸುವುದನ್ನು ಮರೆಯಲಿಲ್ಲ, ತಮ್ಮ ಸಾಮರ್ಥ್ಯದ ಮೂಲಕ ಹೊಸ ಅಭಿವೃದ್ಧಿಗಳನ್ನ ಬೆಳೆಸಿಕೊಂಡು ಹೊಸ ಹೊಸ, ಸಾಮರ್ಥ್ಯಗಳನ್ನು ಸೃಷ್ಟಿ ಕೊಡಿ ಸೃಷ್ಟಿಸಿಕೊಂಡು, ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕಿ ತೋರಿಸಿದರು, ಯುವಕರಿಗೆ, ಸಮಾಜಕ್ಕೆ, ಚಿತ್ರರಂಗಕ್ಕೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದರು, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಸಮಾಜದ ಜೊತೆಗೆ ಅವನು ಸರಳತೆಯಿಂದ ಪ್ರತಿಯೊಂದು ಕಲಿಯುವ ಮನಸ್ಥಿತಿ ಇರಬೇಕು ಅಂದಾಗ ಮಾತ್ರ ಅವನು ವ್ಯಕ್ತಿತ್ವ ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಒಪ್ಪಿಗೆಯಾಗುವ ರೀತಿಯಲ್ಲಿ ಬದುಕು ತೋರಿಸಿದವರು ಪುನೀತ್ ರಾಜಕುಮಾರ್. ಆದ್ದರಿಂದ ಇಷ್ಟೊಂದು ಕೋಟ್ಯಾನುಕೋಟಿ ಜನರ ಅಭಿಮಾನಕ್ಕೆ ಪಾತ್ರವಾಗಿದ್ದಾರೆ. ಬರೀ ನಟನೆ ಅಲ್ಲದೆ ಸಾಮಾಜಿಕ ಸೇವೆ ಸಾಮಾಜಿಕ ಚಿಂತನೆ ಸರ್ಕಾರದ ಯೋಜನೆಗಳನ್ನು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಯಾವುದೇ ಸಂಭಾವನೆ ಪಡೆಯದೆ ಸಮಾಜ ಸೇವೆ ಎಂಬ ದೃಷ್ಟಿಯಿಂದ ಮಾಡಿರುವುದು ಅವರು ಮಾಡಿರುವ ಕಾರ್ಯಗಳಲ್ಲಿ ಬಹಳ ಅದ್ಭುತವಾದದ್ದು. ಇಂದಿನವರೆಗೂ ಯಾವುದೇ ದುಷ್ಟಗಳಿಗೆ ಬಲಿಯಾಗದೆ ಯಾವುದೇ ಸಮಾಜಘಾತಕ, ಚಟುವಟಿಕೆಗಳಿಗೆ ಬಲಿಯಾಗದೆ ಸಮಾಜಘಾತುಕ ಸಮಾಜ ವಿರೋಧಿ ದುಷ್ಟ ಚಟಗಳಿಗೆ ಬಲಿಯಾಗುವಂತಹ ಯಾವುದೇ ಜಾಹೀರಾತು ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸವನ್ನ ಅವರು ಮಾಡಿದ್ದಾರೆ.
ಇದೆಯಲ್ಲವಾ ಒಬ್ಬ ನಟನ ಕೆಲಸ. ಒಬ್ಬ ನಟ ಎಂದರೆ ಸಮಾಜಕ್ಕೆ ಒಂದು ಮಾದರಿಯಾಗಿರುತ್ತಾರೆ ಅವನನ್ನು ಅನುಸರಿಸುವ ಉಳಿದೆಲ್ಲಾ ವ್ಯಕ್ತಿಗಳು ಅದನ್ನು ಪಾಲಿಸುತ್ತಾರೆ, ಆ ಸಾಮಾನ್ಯ ಜ್ಞಾನದಿಂದ ಅವರು ತಮ್ಮ ಜೀವನವನ್ನು ರೂಪಿಸಿಕೊಂಡರೆ ಸಮಾಜಕ್ಕೆ ಮಾದರಿಯಾಗುತ್ತಾರೆ ಅಂತ ವ್ಯಕ್ತಿತ್ವವನ್ನು ಹೊಂದಿದವರೇ ಪುನೀತ ರಾಜಕುಮಾರ.
29 ಅಕ್ಟೋಬರ್ 2021 ಇಡೀ ಕರ್ನಾಟಕ ತರುಣ ಶ್ರೇಷ್ಠ ನಟನ ಅಗಲಿಕೆಯಿಂದ ಶೋಕದಲ್ಲಿ ಮುಳುಗಿತ್ತು. ಬರೀ ನಟನೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಆರ್ಥಿಕ ಬಲವಿಲ್ಲದ ವ್ಯಕ್ತಿಗಳಿಗೆ ಅವರ ಮಕ್ಕಳಿಗೆ ವಿದ್ಯಾಭ್ಯಾಸ,ವೃದ್ಧರಿಗೆ ನೆರವಾಗುವಂತ ಮಹಾದಾನಿಯಾಗಿದ್ದರು. ಜನರಿಂದ ಬಂದ ಹಣ ಜನರಿಗೆ ಎಂಬ ಸಿದ್ಧಾಂತವನ್ನು ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದರು.
ಬದುಕಿನ ಪ್ರತಿಯೊಂದು ಮೊದಲಿನಲ್ಲಿ ಸಾಧನೆಯ ಗುರುತು ಮೂಡಿಸಿದವರು ಪುನೀತ್. ವ್ಯಕ್ತಿತ್ವ ವಿಕಸನ, ಸದಾ ಅಭ್ಯಾಸಗಳು, ಸಮಯ ನಿರ್ವಹಣೆ, ಕೌಟುಂಬಿಕ ಸೌಖ್ಯ,ಪರೋಪಕಾರ ಅದು ಬೇರವರ ಯಾರಿಗೂ ತಿಳಿಯದಂತೆ ಮಾಡುವ ಪರೋಪಕಾರ. ಇವೆಲ್ಲವೂ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಗರು. ಪುನೀತ್ ಅವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ ಆದರೆ ಅವರು ಎಂದಿಗೂ ಅಳಿಯದ ಮಾಡಿರುವ ಕೆಲಸಗಳಿಂದ ಹಾಗೂ ನಡೆಸಿದ ಶಿಸ್ತಿನ ಬದುಕಿನಿಂದ ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ ಆದರೆ ಅವರ ಬದುಕು ಕಾರ್ಯಗಳನ್ನು ತಿಳಿಸುವ, ತುಳಿಯುವ ಕೆಲಸವನ್ನು ನಾವು ಮಾಡಬೇಕಿದೆ.
ಇವರ ಮೂಲ ಹೆಸರು ಲೋಹಿತ್,
ಜನರು ಪ್ರೀತಿಯಿಂದ ಇವರನ್ನು ಅಪ್ಪು ಎಂದು ಕರೆದರು.
ತಂದೆಗೆ ತಕ್ಕ ಮಗ ಪುನೀತ್, ಕರ್ನಾಟಕದ ಅತ್ಯುತ್ತಮ ಡ್ಯಾನ್ಸರ್ ಪುನೀತ್, ಸುಮಧುರ ಗಾಯಕ ಪುನೀತ್, ಒಳ್ಳೆಯ ಫಿಟ್ನೆಸ್ ಆರೋಗ್ಯಕ್ಕೆ ಉದಾರಣೆ ಪುನೀತ್, ಸಕಲ ಜಾತಿ ಪಂಥ ಭೇದವಿಲ್ಲದೆ ಬೆಳೆದ ಸೌಹಾರ್ದತೆಯ ಪುನೀತ್,
ಸದ್ದಿಲ್ಲದೇ ಸಮಾಜಸೇವೆಯಲ್ಲಿ ಪುನೀತ್ ರಾಜಕುಮಾರ್ ತೊಡಗಿಕೊಂಡಿದ್ದ, ಸಿನಿಮಾಗಳಿಗೆ ನಟಿಸಿ ಹಾಡಿ ಟಿವಿ ಶೋ ಗಳನ್ನು ನೀಡಿ ಜಾಹೀರಾತುಗಳಿಗೆ ಪ್ರದರ್ಶನ ನೀಡಿ ಕೋಟಿ ಕೋಟಿ ಹಣ ಸಂಪಾದಿಸಿ ಜನರಿಂದ ಬಂದ ಹಣವನ್ನು ಜನರಿಗೆ ನೀಡುವ ನಿಲುವನ್ನು ತಾಳಿದ ಪುನೀತ್ ರಾಜಕುಮಾರ್ ಇಂದು
26 ಅನಾಥಾಶ್ರಮ,
46 ಉಚಿತಶಾಲೆ,
16 ವೃದ್ದಾಶ್ರಮ,
19 ಗೋಶಾಲೆ ಹಾಗೂ
1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿದಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ಏಕೈಕ ನಟರಾದ ಪುನೀತ್ ರಾಜ್ ಕುಮಾರ್ ಅವರನ್ನು ಒಬ್ಬ 46 ವರ್ಷದ ಯುವಕ ಆದ್ರೆ ಕಡೆಯಲ್ಲಿ ಮನಸ್ಸಲ್ಲಿ, ಹೃದಯದಲ್ಲಿ ಉಳಿಯೋನು ನಮ್ಮ ಕನ್ನಡಿಗ ಅಪ್ಪು ಮಾತ್ರ….
ನೇತ್ರದಾನ ತಮ್ಮ ಮರಣದ ನಂತರ ಕಣ್ಣುಗಳನ್ನು ಉಪಯೋಗಿಸಿಕೊಂಡು ಕಣ್ಣು ದೃಷ್ಟಿ ಇಲ್ಲದವರಿಗೆ ಕೊಡುವ ದಾನ ಮಾಡಿದ್ದರು ಅಕಾಲಿಕವಾಗಿ ಸಾವಿಗೀಡಾದವರು ಕುಟುಂಬದವರು ನೇತ್ರದಾನ ಮಾಡಲು ಮರೆಯಲಿಲ್ಲ ಪ್ರಸ್ತುತ ಇವರ ವೈದ್ಯಕೀಯ ಕಾರ್ಯವಿಧಾನದಿಂದ ಪುನೀತ್ ರಾಜಕುಮಾರ್ ಕಣ್ಣುಗಳು ನಾಲ್ಕು ಜನರಿಗೆ ಬೆಳಕನ್ನು ನೀಡುವ ಕೆಲಸ ಮಾಡುತ್ತಿವೆ.
“ಶರಣರ ನಡೆ ಮರಣದಲಿ ನೋಡಾ” ಎಂದವರು ನಮ್ಮ ಕಲಬುರಗಿಯ ಶರಣ ಬಸಶ್ವೇಶ್ವರರು…. ಸ್ವತಃ ನೋವುಂಡು ಜಗಕ್ಕೆ ನಲಿವು ಹಂಚುವವನೆ ನಿಜವಾದ ದೇವತಾ ಮನುಷ್ಯ…
ನಮಗೆ ಪ್ರೀತಿ ಕೊಟ್ಟು.
ನಮ್ಮನ್ನೆಲ್ಲಾ ಬಿಟ್ಟು
ಕಾಣದಂತೆ ಮಾಯವಾದರು
ನಮ್ಮ ಅಪ್ಪು ಕೈಲಾಸ ಸೇರಿದರು.

-ಶಿವನಗೌಡ ಪೊಲೀಸ್ ಪಾಟೀಲ್,ಲೇಖಕರು
ಉಪನ್ಯಾಸಕರು ಕೊಪ್ಪಳ.
9845646370.
