ತೆಲಂಗಾಣ : ರಾಜ್ಯದ ಹೈದರಾಬಾದ್ ನ ಮಲ್ಲಣ್ಣ ಕುರುಮಾ ಸಂಘದ ಆಯೋಜಿಸಿದ 537 ನೇ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಹಾಲುಮತದ ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಅಪ್ಪಾಜಿಯವರು ಭಂಡಾರ ಹಾಗೂ ಕಂಬಳಿಯ ಮಹತ್ವವನ್ನು ತಿಳಿಸಿ ಎಲ್ಲರಿಗೂ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಜಿಯಾಗುಡದ ಮಲ್ಲಣ್ಣ ಕುರುಮಾ ಸಂಘದ ಅಧ್ಯಕ್ಷರಾದ ಅಮರನಾಥ್ ಹಿರೋಡೇ , ಬೀದರ್ ಜಿಲ್ಲೆಯ ಸಮಾಜದ ಮುಖಂಡರಾದ ಶ್ರೀ ಬಾಲಾಜಿ ಜಾಬಾಡೆ, ಶ್ರೀನಿವಾಸ್ ಮೇತ್ರೆ ಹಾಗೂ
ಸಂಘದ ಪದಾಧಿಕಾರಿಗಳು ಶಿವಾಜಿ ಕುಂಟಬೀರ್, ಅನಿಲ ಮೆತ್ರೆ,ಪ್ರಭು ಪೂಜಾರಿ, ಸಾವಿರಾರು ಭಕ್ತರು ಉಪಸ್ಥಿತರಿದ್ದರು.
