ಚಾಮರಾಜನಗರ ಹನೂರು ತಾಲ್ಲೂಕಿನ ಚಿಕ್ಕಮಾಲಪುರ ಗ್ರಾಮ ಪಂಚಾಯತಿಯಲ್ಲಿ 2023-2024 ನೆ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಾಗೂ 15 ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ಚಿಕ್ಕ ಮಾಲಪುರ ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಡೆಯಿತು.
ತಾಲೂಕ ಸಂಯೋಜಕ ಅಧಿಕಾರಿ ಸಿದ್ದಪ್ಪ ಮಾತನಾಡಿ ನರೇಗಾ ಯೋಜನೆ ಕೃಷಿ ಇಲಾಖೆ ಅರಣ್ಯ ಇಲಾಖೆಯು ಸೇರಿ ಒಟ್ಟು 27 ಕಾಮಗಾರಿಗಳು ನಡೆದಿದ್ದು ಕೂಲಿ ಹಾಗೂ ಸಾಮಾಗ್ರಿಗಳು ಸೇರಿ ಒಟ್ಟು ಮೊತ್ತ 77,91,837 ರೂಪಾಯಿಗಳು ಹಣ ಖರ್ಚಾಗಿದೆ ಎಂದು ಸಭೆಯಲ್ಲಿ ಮಂಡಿಸಿದರು.
ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಆದ್ದರಿಂದ ಗ್ರಾಮದ ಎಲ್ಲಾ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆ ನಾಗೇಶ್ ಮೂರ್ತಿ ಹಾಜರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಅಂತರಾಜು, ಉಪಾಧ್ಯಕ್ಷ ಚೆನ್ನಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ನಾಗಣ್ಣ, ಅಶೋಕ್, ಕಲಾವತಿ ಗುರುಮೂರ್ತಿ ನಾಗೇಶ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ಕಾರ್ಯದರ್ಶಿ ವೆಂಕಟೇಶ್ ಬಿಲ್ ಕಲೆಕ್ಟರ್ ಕೃಷ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉಸ್ಮಾನ್ ಖಾನ್
