
ಕಲಬುರಗಿ: ತಾಲೂಕಿನ ಹೊನ್ನ ಕಿರಣಗಿ ಗ್ರಾಮದ ಯುವಕವಿ ಸಂಗಮನಾಥ ಪಿ ಸಜ್ಜನ ಅವರ ದ್ಡೀತಿಯ ಕವನ ಸಂಕಲನವನ್ನು ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆದ ಕಾವ್ಯಶ್ರೀ ಚಾರಿಟಬಲ್ಟ್ರಸ್ಟ್ ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಗಮನಾಥ ಪಿ ಸಜ್ಜನರವರ ಜೇನುಗೂಡು (ಚಿಣ್ಣರ ಚಿಲಿಪಿಲಿಯ ಸವಿಗಾನ) ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತರು, ಚಲನಚಿತ್ರ ನಿರ್ದೇಶಕರಾದ ರಮೇಶ ಸುರ್ವೆ ಅವರು ಮಕ್ಕಳ ಕೈಗೆ ಮೊಬೈಲ್ ಕೊಡುವುದನ್ನು ಬಿಡಿ, ಅವರಿಗೆ ಪುಸ್ತಕ ಕೊಡಿ, ಸಾಹಿತ್ಯದ ಬಗ್ಗೆ ತಿಳಿಸಿ, ಮಕ್ಕಳೊಂದಿಗೆ ನೀವು ಮಕ್ಕಳಾಗಿ ಪುಸ್ತಕಗಳನ್ನು ಓದಿ ಎಂದು ಸಲಹೆ ನೀಡಿದರು.
ಪುಸ್ತಕ ಪರಿಚಯಿಸಿ ಮಾತನಾಡಿದ ಸಾಹಿತಿ ಟಿ.ಸತೀಶ್ ಜವರೇಗೌಡರು ಮಕ್ಕಳಿಂದ ಬೆನ್ನುಡಿ ಬರೆಸಿಕೊಂಡ ಮೊದಲ ಕವಿಯಾಗಿ ಹೊರಹೊಮ್ಮಿದ್ದಾರೆ. ಎಲ್ಲಾ ಕವಿತೆಗಳು ಚಿತ್ರಸಹಿತವಾಗಿದ್ದು, ಮಕ್ಕಳ ಕಲಿಕೆಗೆ ಉತ್ತಮವಾಗಿವೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಡಾ.ಆರೂಢ ಭಾರತೀ ಸ್ಡಾಮಿಗಳು, ಖ್ಯಾತ ನಟಿ ಮಾಲತಿಶ್ರೀ ಮೈಸೂರು, ಸಮಾಜ ಸೇವಕರಾದ ಹೇಮಾವತಿ ಶಿವಣ್ಣ, ಡಾ.ಶ್ವೇತಾ ಪ್ರಕಾಶ್, ಡಾ.ರೇವಣ್ಣ ಸಾಹಿತಿಗಳಾದ ಡಾ.ರಾಮಲಿಂಗೇಶ್ವರ ಶಿಸಿರಾ, ಡಾ.ಚಂದ್ರಶೇಖರ ಮಾಡಲಗೇರಿ,ಚಿತ್ರನಟಿ ಸುಪ್ರಿಯಾ ನಿಪ್ಪಾಣಿ ಹಾಗೂ ಇತರ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಎಂದು ಪ್ರತಿಕಾ ಪ್ರಕಟಣೆಗಾಗಿ ಉಪನ್ಯಾಸಕರಾದ ಡಿ.ಪಿ.ಸಜ್ಜನ ತಿಳಿಸಿದ್ದಾರೆ.
