ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಚ್.ಡಿ. ಎಫ್. ಸಿ. ಬ್ಯಾಂಕ್ ಉದ್ಘಾಟನೆಸಾಮಾನ್ಯ ಮನುಷ್ಯನನ್ನು VIP ಯನ್ನಾಗಿ ಮಾಡಲು ಶ್ರಮಿಸೋಣ – ಶಾಸಕ ಡಾ. ಶ್ರೀನಿವಾಸ್. ಎನ್.ಟಿ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಹಿರೇಮಠ ಆವರಣದಲ್ಲಿ ರಾಷ್ಟ್ರೀಯ ಕೇಂದ್ರಿಕೃತ ಬ್ಯಾಂಕ್ ಗಳಲ್ಲಿ ಒಂದಾದ ಹಾಗೂ ಪ್ರಪ್ರಥಮ ಬಾರಿಗೆ ಸ್ಥಾಪಿಸಲ್ಪಟ್ಟ ಎಚ್.ಡಿ. ಎಫ್. ಸಿ. ಬ್ಯಾಂಕ್ ಅನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ, ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು – ಊರಿನ ಮುಖಂಡರ ಸಮ್ಮುಖದಲ್ಲಿ ದಿ 01-01-2025 ರಂದು ಉದ್ಘಾಟಿಸಿದ
ಬಳಿಕ ಮಾತನಾಡುತ್ತಾ ನಮ್ಮ ಕ್ಷೇತ್ರದಲ್ಲಿ ಬಡವರು ಮತ್ತು ಕಡುಬಡವರು ಇರುವಂತಹ ಜನರು, ಮುಖ್ಯವಾಗಿ ಪ್ರಾಮಾಣಿಕವಾಗಿ ದುಡಿದು ತಿನ್ನುವಂತದ್ದು ಇದೆ. ನಮ್ಮಲ್ಲಿ ಯಾವುದೇ ಒಂದು ಪ್ರದೇಶ ಮತ್ತು ಅಲ್ಲಿನ ಜನ ಅಭಿವೃದ್ಧಿಯ ದಿಕ್ಕಿನ ಪಥವನ್ನು ಬದಲಾಯಿಸುವುದಾದರೇ, ಮೊದಲು ಅಲ್ಲಿ ಬ್ಯಾಂಕ್ ಮತ್ತು ಆಸ್ಪತ್ರೆಗಳು ತಲೆ ಎತ್ತಬೇಕು. ಆಗದಾಗ ಮಾತ್ರ, ನಮ್ಮಲ್ಲಿನ ಮಹಿಳೆಯರು, ರೈತರು, ಯುವಕರು ಮತ್ತು ಕಾರ್ಮಿಕರ ಸಬಲೀಕರಣ ಹೊಂದಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಸೇರಿ, ಜನರು ಆರ್ಥಿಕವಾಗಿ ಬಲಿಷ್ಟರಾಗಲು ಒಳ್ಳೆಯ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸಿದಾಗ ಮಾತ್ರ ಬ್ಯಾಂಕ್ ಗಳು ಹೆಮ್ಮರವಾಗಿ ಬೆಳವಣಿಗೆಯಾಗುತ್ತವೆ. ಹಾಗೆಯೇ ಜ‌ನರು ಸಹಿತ ಅಭಿವೃದ್ಧಿ ಕಡೆ ಸಾಗುತ್ತಾರೆ. ನಾನು, ಸಹಿತ ಎಚ್. ಡಿ. ಎಫ್. ಸಿ. ಬ್ಯಾಂಕ್ ನಲ್ಲಿ ಖಾತೆ ತೆರೆದಿರುವೆ. ಒಳ್ಳೆಯ ಸೇವೆ ಸಲ್ಲಿಸುತ್ತಿರುವುದು ಇದೆ. ಹೀಗಾಗಿ ನಾವು ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯ ಪಥದ ದಿಕ್ಕಿನ ಕಡೆ ಸಾಗೋಣ ಎಂದೂ ಹೇಳಿದರು. ಹಾಗೆಯೇ, ನಮ್ಮಲ್ಲಿ ಕಟ್ಟ ಕಡೆಯ ಸಮಾಜದ ಸಾಮಾನ್ಯ ವ್ಯಕ್ತಿಯನ್ನು ಸಹಿತ VIP ಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ, ಪಟ್ಟಣ ಪಂಚಾಯತಿಯ ಅಧಿಕಾರಿಗಳಾದ ಶ್ರೀ ಮುಗುಳಿ ಅವರು, ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಂಕರ್ ಮತ್ತು ಸದಸ್ಯರಾದ ಪೂರನಾಯಕ್, ಭಾಷಾ ನಾಯಕ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ. ಗುರುಸಿದ್ಧನಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಹಾಲಪ್ಪ, ಎಚ್ .ಡಿ. ಎಫ್. ಸಿ. ಬ್ಯಾಂಕ್ ವ್ಯವಸ್ಥಾಪಕರಾದ ಪಂಪಾಪತಿ, ಮತ್ತು ಸಿಬ್ಬಂದಿ ವರ್ಗ, ಮುಖಂಡರಾದ ಶ್ರೀಮತಿ ಜಿಂಕಲ್ ನಾಗಮಣಿ, ಶಫಿ ಇಂಜಿನಿಯರ್, ಕೋಗಳಿ ಕೊಟ್ರೇಶ, ಜಿಲಾನ್, ಇ.ಒ.ಬಸಣ್ಣ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ