ಸಿಂಧನೂರು : ನಗರದ ಗಂಗಾವತಿ ರಸ್ತೆಯಲ್ಲಿರುವ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ 2025 ವರ್ಷದ ನೂತನ ಕ್ಯಾಲೆಂಡರನ್ನು ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ವೆಂಕಟೇಶ ಚೌಹಾಣ್ ಅನಾವರಣ ಮಾಡಿದರು.
ಮಾನ್ವಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಸಿಂಧನೂರು ಶಾಖೆಯಲ್ಲಿ 2025 ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಸಿಂಧನೂರು ಶಾಖಾ ವ್ಯವಸ್ಥಾಪಕರಾದ ಸೂಗನಗೌಡ ಚಿಕಲಪರ್ವಿ ಅವರು ಮಾತನಾಡುತ್ತಾ, ಮಾನ್ವಿಯ ಕೇಂದ್ರ ಕಛೇರಿಯು ಡಾ. ಶಂಕರಗೌಡ ಎಸ್ ಪಾಟೀಲ್ ಇವರ ನೇತೃತ್ವದಲ್ಲಿ 2003 ರಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿದರು. ಪ್ರಧಾನ ಕಚೇರಿಯಲ್ಲಿ ವೀರೇಶ್ ಎನ್ ಹೊಸೂರು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಸಿಂಧನೂರು ಶಾಖೆಯನ್ನು ಆರಂಭಿಸಲಾಗಿದ್ದು ಇಲ್ಲಿಯವರೆಗೆ 250ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ನಮ್ಮ ಸಹಕಾರಿ ಸಂಘದಲ್ಲಿ ಆವರ್ತ ಠೇವಣಿ (ಶೇ.10.5) ಮತ್ತು ಮುದ್ದತ ಠೇವಣಿಗೆ (ಶೇ.11.00) ಹೆಚ್ಚಿನ ಬಡ್ಡಿ ಬಡ್ಡಿದರ ದೊರೆಯುತ್ತಿದ್ದು, ಜೊತೆಗೆ ವಿಶೇಷ ಠೇವಣಿಗೆ ಯೋಜನೆಗಳು ನಮ್ಮ ಸಹಕಾರಿಯಲ್ಲಿವೆ. ಸಿಂಧನೂರಿನ ನೌಕರರು ಹಾಗೂ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಪಂಪನಗೌಡ, ನಾಗನಗೌಡ, ಪರಮೇಶಪ್ಪ , ಶಿಕ್ಷಕರಾದ ವೀರೇಶ ಗೋನವಾರ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಪ್ರಭಾಕರ್ ಕುಲಕರ್ಣಿ, ಚೆನ್ನಪ್ಪ, ತೀರ್ಥನಗೌಡ, ಬಸವರಾಜ ಮೆಣಸಿನಕಾಯಿ, ಹುಸೇನ್ ಬಾಷಾ, ಬಾಲರಾಜ, ಗಂಗಾಧರ ಸೇರಿದಂತೆ, ಸಿಬ್ಬಂದಿಗಳಾದ ಅಂಬಿಕಾ, ದೇವನಗೌಡ, ಚನ್ನಬಸವ, ಸಚಿನ ಉಪಸ್ಥಿತರಿದ್ದರು.
