ನನ್ನವ್ವ ನನ್ನ ಮಗಳೇ
ನೆನಪಿಸು ನನ್ನ ಮಾತು
ನೊಂದಿಸಬೇಡ ಮನವ
ಕಾಯಿಸಬೇಡ ಉದರವ
ಕೊಂಚ ದಿವಸ ಕಾಯ್ದು ನೋಡು ಮಗಳೇ
ನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ
ನಿನ್ನ ನೋವಿಗೆ ಧೈರ್ಯವಾಗಿ
ನಿನ್ನ ಸಂತಸಕ್ಕೆ ಸಂಭ್ರಮವಾಗಿ
ನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿ
ನಿನ್ನ ಯಶಸ್ಸಿನ ಹಾದಿಗೆ ಸದಾ ಕಾಯ್ತಾ ಇರುತ್ತೇನೆ ಮಗಳೇ…
- ಇಂತಿ ನಿನ್ನ ಅಪ್ಪ.

ರಚನೆ ಅನುರಾಧ ಡಿ ಸನ್ನಿ
