ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಬನದ ಹುಣ್ಣಿಮೆಗೆ ಶ್ರೀ ಬನಶಂಕರಿ ದೇವಿಯ ಜಾತ್ರೆಯು ಬಹು ವಿಜೃಂಭಣೆಯಿಂದ ನೆರವೇರಿಸಲಾಗುವುದು ಕಾರಣ ಶ್ರೀ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಜರಗುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಸಕ್ರಿಯವಾಗಿ ಪಾಲ್ಗೊಂಡು ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಬನಶಂಕರಿ ದೇವಿ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬನಶಂಕರಿ ದೇವಿ ದೇವಾಂಗ ಜೀರ್ಣೋದ್ಧಾರ ಟ್ರಸ್ಟ್ (ರಿ.) ಇವರು ವಿನಂತಿಸಿದ್ದಾರೆ.
ಕಾರ್ಯಕ್ರಮಗಳ ವಿವರ :
ಸ್ವಸ್ತಿ ಶ್ರೀ ಮನ್ ರೂಪ ಶಾಲಿವಾಹನ ಶೆಕೆ 1946 ಕ್ರೋಧಿ ನಾಮ ಸಂವತ್ಸರ ಪುಷ್ಯ ಶು. ಬುಧವಾರ ದಿನಾಂಕ : 08-01-2025 ರಂದು ಶ್ರೀ ಬನಶಂಕರಿ ದೇವಿಯ ಗಂಗಾ ಸ್ಥಾನದೊಂದಿಗೆ ಆರಂಭಗೊಂಡು ದಿನಾಂಕ.11-01-2025 ರ ವರೆಗೆ ಸಾಯಂಕಾಲ 7.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ನಿತ್ಯ ಪಲ್ಲಕ್ಕಿ ಮೆರವಣಿಗೆ ಜರಗುವುದು.
ವಿಶೇಷ ಪಲ್ಲಕಿಯ ಮೆರವಣಿಗೆ :
ರವಿವಾರ ದಿನಾಂಕ 12-01-2025 ರಂದು ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 6.00 ಗಂಟೆಯವರೆಗೆ ಪುರವಂತರ ಸೇವೆಯ ಜೊತೆಗೆ ಭಜನೆ, ಕೋಲಾಟ, ಬ್ಯಾಂಡ್ ಬಾಜಿಯೊಂದಿಗೆ ಊರಿನ ಎಲ್ಲಾ ಓಣಿಗಳಲ್ಲಿ ಪೂಜ್ಯ ಶ್ರೀ ಬಸವಲಿಂಗ ಶಿವಾಚಾರ್ಯರು, ಹಿರೇಮಠ ಕೊಡ್ಲಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲ್ಮಡಗಿ ಇವರ ಸಮ್ಮುಖದಲ್ಲಿ ಶ್ರೀ ಬನಶಂಕರಿ ದೇವಿಯ ವಿಶೇಷ ಪಲ್ಲಕ್ಕಿ ಮೆರವಣಿಗೆ ಜರಗುವುದು.
ದಿನಾಂಕ. 13-012025 ಸೋಮವಾರ ಮಧ್ಯಾಹ್ನ 3:00 ಗಂಟೆಗೆ 5 ಮನೆಗಳಿಂದ ಶ್ರೀ ಬನಶಂಕರಿ ದೇವಿಗೆ ತನಾರತಿ ಮತ್ತು ಕುಂಭ ಸಮರ್ಪಣೆ ನಂತರ ಪುರವಂತರ ಜೊತೆಗೂಡಿ ಊರಿನ ಪ್ರಮುಖರಾದ ಶ್ರೀ ರಾಮಲಿಂಗ ರೆಡ್ಡಿ ಬಿ ದೇಶಮುಖರ ಮನೆಯಿಂದ ದೇವಿಯ ರಥದ ಕಳಸವನ್ನು ಪಲ್ಲಕ್ಕಿ ಮೆರವಣಿಗೆಯೊಂದಿಗೆ ತರುವುದರ ಜೊತೆಗೆ ಶ್ರೀ ಭೀಮರಾವ್ ಎನ್ ಪಾಟೀಲ್ ರ ಮನೆಯಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ವಿರಾಜಮಾನ ವಾಗಿಸಿ ಕೊಂಡು ದೇವಸ್ಥಾನಕ್ಕೆ ಆಗಮಿಸಿದ ನಂತರ ಸಾಯಂಕಾಲ 6.00 ಗಂಟೆಗೆ ವೈಭವದ ರಥೋತ್ಸವ ಜರುಗುವುದು. ನಂತರ13-01-2025 ರಂದು ಸಂಜೆ 8.00 ಗಂಟೆಗೆ ಏಳುಕೊಳ್ಳದ ಎಲ್ಲಮ್ಮನ ನಾಟಕ ಕಾರ್ಯಕ್ರಮ ಜರುಗುವುದು.
ದಿನಾಂಕ. 14-01-2025 ಮತ್ತು15-01-025 ಸಾಯಂಕಾಲ 6-00 ಗಂಟೆಗೆ ಕೋಡ್ಲಿಯ ವಿವಿಧ ಮಕ್ಕಳಿಂದ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಜರುಗುವುದು.16-01-2025 ರಂದು 6:00 ಗಂಟೆಗೆ ಕು. ಸಂಜನಾ ದಯಾನಂದ ಹುಲಸಗೂಡ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯುವುದು.
ಸಹಸ್ರ ದೀಪೋತ್ಸವ ದಿನಾಂಕ 16-01-2025 ಸಾಯಂಕಾಲ 6 :30ಗಂಟೆಗೆ ಶ್ರೀ ಪರಮಪೂಜ್ಯ ಡಾ || ಅಪ್ಪಾರಾವ ದೇವಿ ಮುತ್ಯಾ ( ಮಹಾರಾಜರು) ಸುಕ್ಷೇತ್ರ ಶ್ರೀನಿವಾಸರಡಿಗಿ ಹಾಗೂ ಶ್ರೀ ಶ್ರೀ ಶ್ರೀ ಅಭಿನವ ಶರಣ ಶಂಕರ ಲಿಂಗ ಮಹಾರಾಜ, ಸುಕ್ಷೇತ್ರ ಸೋಂತ ಹಾಗೂ ಶ್ರೀ.ಷ.ಬ್ರ. ಚಂದ್ರಗುಂಡ ಶಿವಾಚಾರ್ಯರು, ಸಂಸ್ಥಾನ ಮಠ ಹೊನ್ನಕಿರಣಗಿ ಮತ್ತು ಶ್ರೀ. ಷ.ಬ್ರ.ಡಾ || ಚನ್ನ ರುದ್ರಮುನಿ ಶಿವಾಚಾರ್ಯರು, ಶ್ರೀ ಗುರು ರುದ್ರ ಮುನೀಶ್ವರ ಸಂಸ್ಥಾನ ಹಿರೇಮಠ ಸೂಗೂರು ( ಕೆ ), ಶ್ರೀ. ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ,ವೇ. ಮೂ. ಶಂಕ್ರಯ್ಯ ಸ್ವಾಮಿ ಯಲ್ಮ ಡಗಿ ಶ್ರೀ ಬನಶಂಕರಿ ದೇವಿಯ ರುದ್ರ ಪಾರಾಯಣಿಕರು ಕೋಡ್ಲಿ ಹಾಗೂ ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗುವುದು. ಹಾಗೂ ರಾಜಕೀಯ ಗಣ್ಯ ಮಾನ್ಯರು ಭಾಗವಹಿಸುವವರು.
ಆದರದ ಸ್ವಾಗತ ಸ್ವಾಗತ ಕೋರುವವರು :
ಶ್ರೀ ಬನಶಂಕರಿ ದೇವಿ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬನಶಂಕರಿ ದೇವಿ ದೇವಾಂಗ ಜೀರ್ಣೋದ್ಧಾರ ಟ್ರಸ್ಟ್ (ರಿ.) ಕೋಡ್ಲಿ ತಾ. ಕಾಳಗಿ ಜಿಲ್ಲೆ. ಕಲಬುರ್ಗಿ
ಮೊಬೈಲ್:9972092327 -9632249596
ವರದಿ: ಶ್ರೀ ಚಂದ್ರಶೇಖರ್ ಆರ್ ಪಾಟೀಲ್
