ಅನ್ನ ನೀರು ನಿನ್ನಲ್ಲಿರುವ ತನಕ
ನಿನ್ನ ಬಯಸಿ ಬರುವರು
ನಿನ್ನಲ್ಲಿಹ ಅನ್ನ ಮುಗಿದೊಡನೆ
ಎಲ್ಲ ದೂರ ಸರಿಯುವರು
ಸಿರಿವಂತ ಸ್ಥಿತಿವಂತ ನೀನಾದರೆ
ಹತ್ತು ಬಣ ಬಂದು ನಿಲ್ಲುವರು
ಬಡತನ ಬೇಗೆಯಲ್ಲಿ ನೀನಿದ್ದರೆ
ಹತ್ತಿರ ಯಾರು ಸುಳಿಯರು
ಅಂತರಂಗದ ಶುದ್ಧ ಗುಣ ನೋಡದೆ
ತಾತ್ಸಾರ ಭಾವನೆ ತೋರುವರು
ಬಹಿರಂಗದ ಆಡಂಬರದಿ ಮೆರೆದರೆ
ಮಣೆಯ ಹಾಕಿ ಸತ್ಕರಿಸುವರು.
ಸತ್ಯ ಮಾರ್ಗವ ಅಪ್ಪಿ ಬಯಸದೆ
ಬೆಪ್ಪರಾಗುತ ಸಾಗುವರು
ಮಿಥ್ಯವನು ಒಪ್ಪುತ ಅರಿಯದೆ
ಕಪಟತನಕೆ ಬಲಿಯಾಗುವರು
ನ್ಯಾಯ ನೀತಿಯ ಕೇಳ ಹೋದರೆ
ಹುಚ್ಚನ ಪಟ್ಟ ಕಟ್ಟುವರು
ತಲೆ ಬಾಗಿ ಸಹಿಸಿಕೊಂಡು ನಡೆದರೆ
ಅಯೋಗ್ಯ ಎಂದು ನಿಂದಿಸುವರು.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ:-9740199896.
