ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಭ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಗಿತು.
ಭಕ್ತರು ರಥವನ್ನು ಎಳೆಯುತ್ತಿದ್ದಂತೆ ಸಂತೋಷದಿಂದ ವೀರಭದ್ರೇಶ್ವರ ರಥವನ್ನು ವಾದ್ಯಗಳೊಂದಿಗೆ, ನಂದಿಕೋಲು ತಮಟೆ ಇನ್ನಿತರ ವಾದ್ಯಗಳೊಂದಿಗೆ ಸಂಭ್ರಮದಿಂದ ಭಕ್ತಾದಿಗಳು ವೀರಭದ್ರೇಶ್ವರ ರಥಕ್ಕೆ ಉತ್ತುತ್ತಿ,ಬಾಳೆಹಣ್ಣು, ಮೆಣಸು ಸಮರ್ಪಿಸಿದರು ಹಾಗೂ ಮರಭ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಕೆಲ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಗಮಿಸಿದ್ದಲ್ಲದೆ, ಇನ್ನು ಕೂಡ್ಲಿಗಿ, ಕಕ್ಕುಪ್ಪಿ,ಚೌಡಾಪುರ, ಬಡ್ಲೇಡಕು ಇನ್ನು ಮುಂತಾದ ಹಳ್ಳಿಗಳಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿ,ಕಾರು,ಬೈಕುಗಳ ಮೂಲಕ ಸಾವಿರಾರು ಜನರು ಆಗಮಿಸಿದರು.
ಅಮ್ಮನ ಕೆರೆ ಹೋಟೆಲ್ ಕುಮಾರಪ್ಪನ ಮಗ ಬಸವರಾಜ್( ಒಂದು ಲಕ್ಷದ ಅರವತ್ತೊಂದು ಸಾವಿರದ ನೂರ ಒಂದು ) 1,61,101 ಮುಕ್ತಿಪಟವನ್ನು ವೀರಭದ್ರೇಶ್ವರ ಕೃಪೆಯಿಂದ ಮುಕ್ತಿಪಟವನ್ನು ಪಡೆದುಕೊಂಡರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ,ವಿಜಯನಗರ ಹಾಗೂ ನೆರೆಹೊರೆಯ ರಾಜ್ಯಗಳದಂತ ಆಂಧ್ರಪ್ರದೇಶ, ತೆಲಂಗಾಣ,ಮಹಾರಾಷ್ಟ್ರ,ಇನ್ನು ಮುಂತಾದ ರಾಜ್ಯ ಜಿಲ್ಲೆಗಳಿಂದ ಎಲ್ಲಾ ಭಕ್ತಾದಿಗಳು ಬಂದು ಶಾಂತಿಯುತದಿಂದ ರಥೋತ್ಸವ ಕಾರ್ಯಕ್ರಮವನ್ನು ನೆರೆವೇರಿಸಿದರು.
ಕೂಡ್ಲಿಗಿ ಜನಪ್ರಿಯ ಶಾಸಕರಾದಂತ ಡಾಕ್ಟರ್ ಎನ್ ಟಿ ಶ್ರೀನಿವಾಸ್, ತಹಶೀಲ್ದಾರ್ ಎಮ್ ರೇಣುಕಾ , ಧಾರ್ಮಿಕ ದತ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ಹಾಗೂ ಕೂಡ್ಲಿಗಿ ಸಿಪಿಐ ಸುರೇಶ್ ತಳವಾರ್ ಹಾಗೂ ಕಮಿಟಿಯ ಸದಸ್ಯರು ಹಾಗೂ ಕಮಿಟಿಯ ಅಧ್ಯಕ್ಷರು ಊರಿನ ಗ್ರಾಮಸ್ಥರು ನಾನಾ ಜಿಲ್ಲೆಯಿಂದ ಲಕ್ಷಾಂತರ ಭಕ್ತಾದಿಗಳು ಸೇರಿ ತುಂಬಾ ಅದ್ದೂರಿಯಾಗಿ ಜಾತ್ರೆಯು ಯಶಸ್ವಿಯಾಗಿ ನೆರವೇರಿಸಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
