ವಿಜಯನಗರ/ಕೂಡ್ಲಿಗಿ : ಕೂಡ್ಲಿಗಿ ಹಿರೇಮಠ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ದಾಸೋಹ ಮಠ ಶ್ರೀ ಶರಣಾರ್ಯರ ನೇತೃತ್ವದಲ್ಲಿ ಪಾಲ್ತೂರು ಶಿವರಾಜ ಅವರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಮ್ಮ ಪ್ರೀತಿಯ ಸಹೋದರರಾದ ಪಾಲ್ತೂರು ಶಿವರಾಜ ಇವರು ಬಾಲ್ಯದ ಶಿಕ್ಷಣ ಹಾಗೂ ಶಿಕ್ಷಕರ ತರಬೇತಿ ಕಾನಾಮಡುಗಿನಲ್ಲಿ, ಉನ್ನತ ವಿದ್ಯಾಭ್ಯಾಸವನ್ನು ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ಮುಗಿಸಿ ಪ್ರಾರಂಭದಲ್ಲಿ ಅರೆಕಾಲಿಕ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಜಗಳೂರು ಪಾಪಾನಾಯಕ ಕಾಲೇಜ್ ಕಾನಹೊಸಹಳ್ಳಿ ಹಾಗೂ ಸಿದ್ದಲಿಂಗೇಶ್ವರ ಕಾಲೇಜ್ ಕಾನಮಡಗಿನಲ್ಲಿ ಸೇವೆ ಸಲ್ಲಿಸಿ ಆನಂತರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಾಲೆ ಶಿಕ್ಷಕರಾಗಿ ಕೊನೆಯದಾಗಿ ಕೂಡ್ಲಿಗಿ ಜೂನಿಯರ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಶಿಕ್ಷಣ ಇಲಾಖೆಯಲ್ಲಿ
ಸುಮಾರು 28 ವರ್ಷಗಳ ಶಿಕ್ಷಕ ವೃತ್ತಿಯ ಜೊತೆಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ, ವಿಜಯನಗರ ಜಿಲ್ಲಾ ಸಹ ಶಿಕ್ಷಕರ ಉಪಾಧ್ಯಕ್ಷರಾಗಿ, ಗುಲ್ಬರ್ಗ ವಿಭಾಗ ಮಟ್ಟದ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ 31/12/2024 ರಂದು ನಿವೃತ್ತಿಯಾಗಿರುತ್ತಾರೆ.
ಶಿವರಾಜ್ ಅವರ ಅಭಿಮಾನಿಗಳು ಸ್ನೇಹಿತರ ಬಳಗ ಅವರ ಸೇವೆಯನ್ನು ಗುರುತಿಸಿ 3/1/2025 ರಂದು ಬೀಳ್ಕೊಡುಗೆ ಸಮಾರಂಭವನ್ನು ಕೂಡ್ಲಿಗಿ ಹಿರೇಮಠ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಹಾಗೂ ದಾಸೋಹ ಮಠ ಶ್ರೀ ಶರಣಾರ್ಯರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಪದ್ಮನಾಭ ಕರಣಂ, ವಿಜಯನಗರ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ರವರು, ವಿಜಯನಗರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ ರವರು, ಕೊಟ್ಟೂರು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಯೋಗೇಶ್ ದಿನ್ನಿ ಅವರು, ಸಂಡೂರು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಸಿದ್ದಣ್ಣನವರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿವಾನಂದನವರು, ತಾಲೂಕು ಸರ್ಕಾರಿ ನೌಕರ ಸಂಘದ ಬಸವರಾಜ್, ಬಾಲ್ಯದ ಗೆಳೆಯರಾದ ನಿವೃತ್ತ ಮುಖ್ಯ ಶಿಕ್ಷಕರಾದ ತಳವಾರ್ ಶರಣಪ್ಪ, ಕಾಸಿಂ ರವರು ಶಿವರಾಜ್ ಅವರ ಜೊತೆಗಿನ ಸ್ನೇಹ ಒಡನಾಟದ ಬಗ್ಗೆ ಮಾತನಾಡಿದರು, ಶಿವರಾಜ್ ಅವರ ಧರ್ಮಪತ್ನಿ ಸುಮಂಗಲ ಅವರು , ಕೊಪ್ಪಳದ ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಪುಷ್ಪಲತಾ ಏಳುಬಾವಿ ,ಶಿಕ್ಷಕ ತರಬೇತಿ ಕೇಂದ್ರದ ನಿವೃತ್ತ ಅದೀಕ್ಷಕರಾದ ಎ ಶರಣಪ್ಪ ರವರು, ನಿವೃತ್ತ ಶಿಕ್ಷಕರಾದ ಗಂಗಣ್ಣ ಮಾಸ್ಟ್ರುಮಾತನಾಡಿದರು.
ವೇದಿಕೆ ಮೇಲೆ ಹಿರೇಮಠ ಪ್ರೌಢಶಾಲಾ ಮುಖ್ಯ ಗುರುಗಳಾದ ವೀರೇಶರವರು,ಸಿದ್ಧಾರಾಧ್ಯರವರು, ಸಂಯುಕ್ತ ಕರ್ನಾಟಕ ವರದಿಗಾರರಾದ ವೀರೇಶ ರವರು, ಹೊಸಪೇಟೆ ನೌಕರ ಸಂಘದ ನಿರ್ದೇಶಕರಾದ ಬಸವರಾಜ್, ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಕೊತ್ಲಮ್ಮ,ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಪಿ.ಮಂಜುಳಾ, ಎ,ಜಿ ಸೋಮಶೇಖರ್ , ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾದ ಅಜ್ಜನಗೌಡ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ನೌಕರ ಸಂಘದ ಪ್ರಮುಖರು ಇದ್ದರು, ಸಮಾರಂಭದಲ್ಲಿ ಅನೇಕ ಶಿಕ್ಷಕರು ಹಿತೈಷಿಗಳು ಅಭಿಮಾನಿಗಳು ನೌಕರರ ಬಂಧುಗಳು ಪತ್ರಿಕಾ ಮಿತ್ರರು ಭಾಗವಹಿಸಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
