ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿಯ ವತಿಯಿಂದ ದಿನಾಂಕ 03-01-2025 ರಂದು ಸಾವಿತ್ರಿಬಾಯಿ ಫುಲೆ ಅವರ 194 ನೇ ವರ್ಷದ ಜಯಂತಿ ಕಾರ್ಯಕ್ರಮವು ರಾಷ್ಟ್ರೀಯ ಕ್ಲಬ್ ಹುಮ್ನಾಬಾದ್ ನಲ್ಲಿ ಹಮ್ಮಿಕೊಳ್ಳಲಾಯಿತು.
ದೇಶದ ಮೊದಲ ಶಿಕ್ಷಕಿ ಅವರ ಬದುಕು ಆದರ್ಶಮಯ ಮತ್ತು ಸ್ಪೂರ್ತಿದಾಯವಾಗಿದ್ದು, ಇಂದಿನ ಪೀಳಿಗೆಗೆ ಅದು ಮಾದರಿಯಾಗಿದೆ, ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಡಾಕುಳಗಿ ಇವರ ಅಧ್ಯಕ್ಷತೆಯಲ್ಲಿ ಹುಮ್ನಾಬಾದ್ ತಾಲೂಕಿನ ಸರ್ವ ಸದಸ್ಯರ ಸಭೆ ಹಾಗೂ ಸಮಿತಿ ಪುನರ್ ರಚನೆ ಮಾಡಿ, ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ರಾಹುಲ್ ಉದ್ದಾ ತಾಲೂಕ ಸಂಚಾಲಕರು, ತಾಲೂಕ ಸಂಘಟನಾ ಸಂಚಾಲಕರುಗಳಾದ ಶಾಂತಕುಮಾರ್ ಅರಳಿ, ಬಲ ಭೀಮ್ ಶಿಂದೆ, ಸುಧಾಕರ್ ಸಂಗಮ, ಮೋಹನ್ ಹುಡುಗಿ, ಶ್ರೀನಿವಾಸ್ ಕಲ್ಲೂರ್, ಭಾರತ ಭಾಗ್ಯಕರ್, ಚಂದ್ರಶೇಖರ್ ಮಾಲೆ ಖಜಾಂಚಿ, ಹಿರಿಯ ಸದಸ್ಯರುಗಳಾಗಿ ಪ್ರಭು ಮಾಳ ನಾಯಕ, ಮಹೇಶ್ ಕ್ಯಾದೆ, ಪ್ರಕಾಶ್ ಗಡವಂತಿ, ಅವಿನಾಶ್ ಮೇಲಕೇರಿ ವಿದ್ಯಾರ್ಥಿ ಘಟಕದ ತಾಲೂಕ ಸಂಚಾಲಕರು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜಕುಮಾರ್ ಬನ್ನೇರ್, ರಂಜಿತಾ ಜೈನೂರ್, ಕೈಲಾಸ್ ಮೇಟಿ, ಲಕ್ಷ್ಮಣ್ ಶೆರಿಕಾರ, ಬಾಬು ಮಾಲೆ, ವಿಠಲ್ ಲಾ ಡ್ಕರ್, ತುಕಾರಾಂ ಲಾಡ್ಕರ್, ಪ್ರಭು ಚಿತಕೋಟ, ಮಾಣಿಕ್ ಮಾಡಗೂಳ, ಪಾಂಡುರಂಗ ನಾಯಕ್, ಸಿದ್ದಾರ್ಥ್ ಕಾಂಬಳೆ, ಬಸವರಾಜ್ ಕಾಂಬಳೆ, ಅಹಮದ್ ಅಲಿಯಾಬಾದ್, ಝರೆಪ್ಪಾ ರಾಂಪುರೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ರೋಹನ್ ವಾಘಮಾರೆ
